October 15, 2026
Thursday, October 15, 2026
spot_img

ಈ ಥರ ಆಗತ್ತೆ ಅಂದ್ಕೊಂಡೇ ಇರಲಿಲ್ಲ, ತಮಿಳುನಾಡಿನಲ್ಲಿ ಹೊಸ ಯುಗಾರಂಭ ಎಂದ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡು ಫಲಿತಾಂಶ ಆಶ್ಚರ್ಯ ತಂದಿದೆ, ಈ ರೀತಿ ಆಗತ್ತೆ ಅಂತ ಅಂದ್ಕೊಂಡಿರಲಿಲ್ಲ. ಇಲ್ಲಿ ಹೊಸ ಯುಗ ಆರಂಭ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ತಮಿಳುನಾಡು ಫಲಿತಾಂಶ ಇನ್ನೂ ಡೈಜೆಸ್ಟ್‌ ಆಗಿಲ್ಲ. ಏನೋ ಹೆಚ್ಚಂದ್ರೆ 30-40% ವೋಟ್‌ ಹೋಗಬಹುದು ಅಂದ್ಕೊಂಡ್ವಿ. ಆದರೆ ಈ ಪ್ರಮಾಣದಲ್ಲಿ ಬದಲಾಗುತ್ತೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

ಜನ ಬದಲಾವಣೆ ಬಯಸಿದ್ದಾರೆ. ಇಂದು ದೊಡ್ಡ ಬೆಂಬಲ ಸಿಕ್ಕಿದೆ. ನಿರೀಕ್ಷೆಯಂತೆ ಆಗಿಲ್ಲ ಎಂದಿದ್ದಾರೆ.ದಾವಣಗೆರೆಯಲ್ಲಿ ಕಾಂಗ್ರೆಸ್ ಲೀಡ್ ಇದೆ. ಎಸ್‌ಡಿಪಿಐ ವೋಟ್ ನಮಗೆ ಡೇಂಜರ್ ಆಗಿದೆ. ಎಸ್‌ಡಿಪಿಐ ಅವರನ್ನು ಲೈಟಾಗಿ ತೆಗೆದುಕೊಂಡಿಲ್ಲ. ಇಷ್ಟು ಆಗಲಿದೆ ಅಂತ ಅಂದಾಜಿಸಿರಲಿಲ್ಲ ಎಂದಿದ್ದಾರೆ.

Must Read