ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿ.ಕೆ.ಶಿವಕುಮಾರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಕುಟುಂಬದ ವೈಯಕ್ತಿಕ ಜಗಳ ಇದು. ವೈಯಕ್ತಿಕ ಜಗಳದಿಂದ ರಾಜ್ಯ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ನಿತ್ಯ ಟಾಕ್ ವಾರ್ ನಡೀತಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಇದು ಇಬ್ಬರ ನಡುವೆ ವೈಯಕ್ತಿಕ. ಜನ ಅಭಿವೃದ್ಧಿ ಕೇಳ್ತಿದ್ದಾರೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ. ಇದೇ ನಡೀತಿರಲಿ ಅಂತಾ ಕಾಂಗ್ರೆಸ್ ಬಯಸುತ್ತಿದೆ ಎಂದಿದ್ದಾರೆ.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಇದರಲ್ಲಿ ಎರಡು ಮಾತಿಲ್ಲ. ಆದರೆ ಇವರ ಕುಟುಂಬದ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ. ಪ್ರಜ್ವಲ್ ಪ್ರಕರಣದಿಂದ ಮೈತ್ರಿ ಮೇಲೆ ಪರಿಣಾಮ ಆಗಲ್ಲ. ಮೈತ್ರಿ ಮುಂದುವರಿಯುತ್ತದೆ ಎಂದಿದ್ದಾರೆ.
Yellaru seri aa papiyanna hididu kshikshe kodasi adu bittu mediya gala munde helike kododu alla avnanne safe madta iddralla desha vanna yesttu safe madtira nivuglu