October 17, 2026
Saturday, October 17, 2026
spot_img

ಡಿಕೆಶಿ ನೀವು ಜೈಲಿಗೆ ಹೋಗುವ ದಿನ ಮುಂದೆ ಬರುತ್ತೆ: ಎಚ್. ಡಿ. ಕುಮಾರಸ್ವಾಮಿ ಆಕ್ರೋಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಡಿಕೆಶಿ ನೀವು ಮುಂದೆ ಜೈಲಿಗೆ ಹೋಗುವ ದಿನ ಬರುತ್ತದೆ. ನೀವು ಯಾವ ರೀತಿ ಆಟ ಆಡುತ್ತಿದ್ದೀರಿ ನನಗೆ ಗೊತ್ತಿದೆ. ಎಲ್ಲದಕ್ಕೂ ದೇವರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಟ್ಟೆ ಕೊಡುತ್ತಾನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವರ್ಚುವಲ್ ಲೈವ್ ಮೂಲಕ ಮಾತನಾಡಿದ ಹೆಚ್​ಡಿಕೆ, ನಾನು ಬದುಕಿರುವವರೆಗೂ ರೈತರ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬಿಡೋದಿಲ್ಲ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಜೈಲಿಗೆ ಹೋಗೋ ಕಾಲ ಕೂಡ ಸನ್ನಿಹಿತವಾಗಿದ್ದು, ರೈತರ ಜೊತೆ ನಾನು ನಿಲ್ಲುತ್ತೇನೆ. ಅನಿವಾರ್ಯವಾದರೆ ನಾನೇ ಬರುತ್ತೇನೆ ಎಂದರು.

ಕಳೆದ ಹಲವು ದಿನಗಳಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯಲ್ಲಿ ಸರ್ಕಾರದಿಂದ ಮಾಡಲು ಉದ್ದೇಶಿಸಿರುವ ಇಂಟಿಗ್ರೇಟೆಡ್ ಟೌನ್​​ಶಿಪ್ ವಿರುದ್ಧ ರೈತರ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಿದ ಅವರು, ನಿಮ್ಮ ಪರವಾಗಿ ಧ್ವನಿ ಎತ್ತಲು ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ. ಪಾದಯಾತ್ರೆ ಅನಿವಾರ್ಯವಾದ್ರೆ ನಾನೇ ಬರುತ್ತೇನೆ. ರೈತರ ಜೊತೆ ನಾವು ನಿಲ್ಲುತ್ತೇವೆ. ಇದು ರಾಜಕೀಯ ಪ್ರಶ್ನೆ ಅಲ್ಲ, ಜನರ ಬದುಕಿನ ಪ್ರಶ್ನೆಯಾಗಿದೆ ಎಂದರು.

Must Read