Monday, March 27, 2023

Latest Posts

ಕ್ರಾಂಗೆಸ್‌ ಹಾಳಾಗುತ್ತಿರುವುದಕ್ಕೆ ಡಿಕೆಶಿ-ವಿಷಕನ್ಯೆ ಕಾರಣ: ರಮೇಶ ಜಾರಕಿಹೊಳಿ

ಹೊಸದಿಗಂತ ವರದಿ, ಬೆಳಗಾವಿ :

ರಾಜ್ಯದಲ್ಲಿ ಕ್ರಾಂಗೆಸ್‌ ಹಾಳಾಗುತ್ತಿರುವುದಕ್ಕೆ ಇಬ್ಬರು ಕಾರಣ, ಒಬ್ಬರು ಡಿಕೆಶಿ ಇನ್ನೊಬ್ಬರು ವಿಷಕನ್ಯೆ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ರಮೇಶ ಜಾರಕಿಹೊಳಿ ಹರಿಹಾಯ್ದರು.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಡಿಕೆಶಿ ಹಾಗೂ ಹೆಬ್ಬಾಳಕರ್ ಅವರಿಬ್ಬರ ಆಡೀಯೊ ನನ್ನ ಬಳಿ ಇದೆ ಶೀಘ್ರವೇ ಬಿಡುಗಡೆ ಮಾಡುತ್ತೇನೆ ಎಂದರು. ಚುನಾವಣೆಯಲ್ಲಿ ನನ್ನನು ಹಣಿಯಲು ಮಹಾನಾಯಕ ಮತ್ತೊಂದು ಷಡ್ಯಂತ್ರ ರೂಪಿಸಿದ್ದಾರೆ. ಮಹಾನಾಯಕನಿಗೆ ಸಂಬಂಧಿಸಿದ ಆಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಡಿಕೆಶಿ ವೈಯಕ್ತಿಕ ವಿಚಾರ ಇದೆ ಮಾತನಾಡುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
2023ರಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯಾವುದೇ ತ್ಯಾಗಕ್ಕೂ ಸಿದ್ಧ. 7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಈ ಬಾರಿ ನನ್ನ ಸ್ಪರ್ಧೆ. ಆದರೆ ಅದಾದ ಮೇಲೆ 8ನೇ ಬಾರಿ ಸ್ಪರ್ಧಿಸಲು ನನಗೆ ಇಷ್ಟವಿಲ್ಲ. ನನ್ನ ಬದಲು ಬೇರೆಯವರಿಗೆ ಶಾಸಕನಾಗಲು ಅವಕಾಶ ನೀಡಲು ನಿರ್ಧರಿಸಿದ್ದೇನೆ. ಆದರೂ, ಎಲ್ಲ ವಿಚಾರವನ್ನು ಪಕ್ಷದ ತೀರ್ಮಾನಕ್ಕೆ ಬಿಡುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!