2023ರಲ್ಲಿ ಎಲಾನ್ ಮಸ್ಕ್‌ ಅಮೆರಿಕ ಅಧ್ಯಕ್ಷರಾಗ್ತಾರೆ: ಡಿಮಿಟ್ರಿ ಭವಿಷ್ಯವಾಣಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದಲ್ಲಿ 2023ರಲ್ಲಿ ಅಂತರ್ಯುದ್ಧ ಆರಂಭವಾಗಲಿದ್ದು, ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ಸ್ವತಂತ್ರ ರಾಜ್ಯಗಳಾಗಲಿದೆ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಭವಿಷ್ಯ ನುಡಿದಿದ್ದಾರೆ. ಅಮೆರಿಕದಲ್ಲಿ ಹೊಸ ಅಂತರ್ಯುದ್ಧ ಮುಗಿದ ನಂತರ ಟ್ವಿಟರ್‌ ಸಿಇಒ ಎಲೋನ್ ಮಸ್ಕ್ ಅಧ್ಯಕ್ಷರಾಗುತ್ತಾರೆ ಎಂದು ಮೆಡ್ವೆಡೆವ್ ಸರಣಿ ಟ್ವೀಟ್‌ಗಳ ಮೂಲಕ ಭವಿಷ್ಯವಾಣಿ ನುಡಿದಿದ್ದಾರೆ.
ಪುಟಿನ್ ಅವರ ಸಲಹಾ ಭದ್ರತಾ ಮಂಡಳಿಯ ಉಪ ಮುಖ್ಯಸ್ಥರಾದ ಮೆಡ್ವೆಡೆವ್ ಅವರು ಪುಟಿನ್ ಪ್ರಧಾನಿ ಹುದ್ದೆಯಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಈಗ ಮಿಲಿಟರಿ ಮೇಲ್ವಿಚರನೆಯಲ್ಲಿ ಪುಟಿನ್ ಅವರ ಉಪನಾಯಕರಾಗಿ ಸೇವೆ ಸಲ್ಲಿಸುತ್ತಾರೆ. ಯುರೋಪ್ ವಿಭಜನೆಯಾಗುತ್ತದೆ, ಪೋಲೆಂಡ್ ಈ ಪ್ರಕ್ರಿಯೆಯಲ್ಲಿ ಮರುವಿಂಗಡನೆಯಾಗುತ್ತದೆ ” ಎಂದು ಸಹ ಮೆಡ್ವೆಡೆವ್ ಭವಿಷ್ಯ ನುಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!