HAIR CARE| ಬೇಸಿಗೆಯಲ್ಲಿ ನಿಮ್ಮ ಕೂದಲು ನಿರ್ಜೀವವಾಗುತ್ತಿದ್ದರೆ ಮೆಂತ್ಯದಿಂದ ಹೀಗೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಾಚೀನ ಕಾಲದಿಂದಲೂ ಭಾರತೀಯರು ಆರೋಗ್ಯ ರಕ್ಷಣೆಗಾಗಿ ಮೆಂತ್ಯವನ್ನು ಸೇವಿಸುತ್ತಿದ್ದಾರೆ. ಮೆಂತ್ಯದಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿನ ಬೆಳವಣಿಗೆಗೂ ಪ್ರಯೋಜನಕಾರಿ. ಇವುಗಳಲ್ಲಿರುವ ಪ್ರೊಟೀನ್, ನಿಯಾಸಿನ್, ಅಮೈನೋ ಆಸಿಡ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಬೇಸಿಗೆಯ ಕೂದಲು ನಿರ್ಜೀವವಾಗುತ್ತದೆ. ಮೆಂತ್ಯವು ಕೂದಲನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಕಾಲು ಕಪ್ ಮೆಂತ್ಯವನ್ನು ನೆನೆಸಿ ಮೊಳಕೆ ಒಡೆಯುವವರಿಗೆ ಬಿಡಿ. ನಂತರ ಅದನ್ನು ಒಣಗಿಸಿ ಮತ್ತು ತೆಂಗಿನ ಎಣ್ಣೆಯಲ್ಲಿ ರುಬ್ಬಿಕೊಳ್ಳಿ. ಈ ಎಣ್ಣೆಯನ್ನು ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ರೇಷ್ಮೆಯಂತಾಗುತ್ತದೆ.

ಕೂದಲಿನ ತುದಿಗಳು ಒಡೆಯದಂತೆ ನೋಡಿಕೊಳ್ಳಲು, ಮೆಂತ್ಯ-ನೆನೆಸಿದ ನೀರಿನಿಂದ ಕೂದಲನ್ನು ಒದ್ದೆ ಮಾಡಿ, ನಂತರ ಮೆಂತ್ಯ ಪುಡಿಗೆ ಸ್ವಲ್ಪ ಮೊಸರು ಸೇರಿಸಿ ಮತ್ತು ತಲೆಗೆ ಪ್ಯಾಕ್ ಮಾಡಿ. ಇವುಗಳಲ್ಲಿರುವ ಪೊಟ್ಯಾಶಿಯಂ ಕೂದಲು ಆರೋಗ್ಯಕರವಾಗಿ ಬೆಳೆಯುವಂತೆ ಮಾಡುತ್ತದೆ.

ಗಟ್ಟಿಯಾಗಿ ಮತ್ತು ದಪ್ಪವಾಗಿ ಬೆಳೆಯಲು ಕ್ಯಾಸ್ಟರ್ ಆಯಿಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಸಮನಾಗಿ ತೆಗೆದುಕೊಳ್ಳಿ.. ಮೆಂತ್ಯ ಕಾಳುಗಳನ್ನು ಹಾಕಿ ಕುದಿಸಿ. ಅದು ತಣ್ಣಗಾದ ನಂತರ ಎರಡು ಹನಿ ಲ್ಯಾವೆಂಡರ್ ಎಣ್ಣೆಯನ್ನು ಹಾಕಿ ತಲೆಗೆ ಹಚ್ಚಿ.. ಮೃದುವಾಗಿ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ತಲೆಯಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!