ನೀರು ಕುಡಿಯುತ್ತೀರಾ..? ಜೋಕೆ…!!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವು ನೀರು ಕುಡಿಯುತ್ತೀರಾ…? ಅದೂ ಊಟದೊಂದಿಗೆ ನೀರು ಕುಡಿಯುತ್ತೀರಾ…? ಈ ಅಭ್ಯಾಸ ನಿಮಗಿದೆಯೇ…ಹಾಗಿದ್ದರೆ ಈ ಸ್ಟೋರಿಯನ್ನೊಮ್ಮೆ ಪೂರ್ತಿ ಓದಿ..

ನೀರು ಪ್ರತಿಯೊಬ್ಬ ವ್ಯಕ್ತಿಯ ದೇಹಕ್ಕೂ ಬೇಕು. ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರು ಒಬ್ಬ ಸಾಮಾನ್ಯ ವ್ಯಕ್ತಿ ಸೇವಿಸಲೇಬೇಕೆಂಬುದು ಆರೋಗ್ಯ ತಜ್ಞರ ಅಭಿಮತ. ಹೀಗಂತ ಎರ್ರಾಬಿರ್ರಿ ನೀರುಕುಡಿಯುವುದು ಕೂಡಾ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ.

ಊಟ ಮಾಡುವಾಗ ನೀರು ಕುಡಿಯುವುದು ಅನೇಕರ ಅಭ್ಯಾಸ. ಊಟ ಮುಗಿಸಿದ ತಕ್ಞಣ ನೀರು ಸೇವಿಸಲೇ ಬೇಕೆಂಬುವರು ಇನ್ನನೇಕರು. ಈ ಅಭ್ಯಾಸ ಹೊಂದಿದವರು ತಕ್ಷಣದಿಂದ ನಿಲ್ಲಿಸಿದಲ್ಲಿ ಆರೋಗ್ಯ ಸುಧಾರಣೆಯಾಗುತ್ತದೆ. ಊಟದ ಜೊತೆ ಜೊತೆಗೆ ಅಥವಾ ಊಟವಾದಕ್ಷಣ ನೀರು ಸೇವಿಸುವುದರಿಂದ ಹೊಟ್ಟೆ ಉಬ್ಬರಿಸುವುದು, ಅಸಿಡಿಟಿಯಂತಹ ಸಮಸ್ಯೆ ಕಂಡು ಬರುತ್ತದೆ. ಜೀರ್ಣ ಕ್ರಿಯೆಯ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಆಹಾರ ಸೇವಿಸುವ ಅರ್ಧ ಗಂಟೆ ಮೊದಲು ಹಾಗೂ ಆಹಾರ ಸೇವನೆಯ  ಒಂದು ಗಂಟೆಯ ನಂತರ ನೀರು ಕುಡಿಯುವುದು ಆರೋಗ್ಯ ದೃಷ್ಠಿಯಿಂದ ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!