ಮೂಗೊಳಗೆ ಕೈ ಹಾಕೋ ಅಭ್ಯಾಸ ಇದೆಯಾ? ಇದರಿಂದ ಆರೋಗ್ಯದ ಮೇಲೆ ಬೀರಲಿದೆ ಗಂಭೀರ ಪರಿಣಾಮ!

ಮಕ್ಕಳಿಂದ ದೊಡ್ಡವರವರೆಗೂ ಮೂಗೊಳಗೆ ಕೈ ಹಾಕಿ ಕೊಳೆ ತೆಗೆಯುವ ಅಭ್ಯಾಸ ಇದ್ದೇ ಇರುತ್ತದೆ. ಇದು ಸಾಮಾನ್ಯವಾಗಿ ಎಲ್ಲರೂ ಮಾಡುವಂಥದ್ದು. ಆದರೆ ಇದೇ ಅಭ್ಯಾಸವಾಗಿ ಹೋದರೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಯಾವ ಸಮಸ್ಯೆಗಳು ನೋಡಿ..

  1. ಮೂಗಿಗೆ ಕೈ ಹಾಕೋದ್ರಿಂದ ಕೈ ಮೇಲೆ ಇರುವ ಬ್ಯಾಕ್ಟೀರಿಯಾ ಹಾಗೂ ಜರ್ಮ್ಸ್ ಮೂಗಿನ ಒಳ ಸೇರಿ ಅನಾರೋಗ್ಯ ಉಂಟಾಗುತ್ತದೆ.
  2. ಪದೇ ಪದೆ ಮೂಗಿಗೆ ಕೈ ಹಾಕೋ ಕೆಟ್ಟ ಅಭ್ಯಾಸಿಂದ ಶಾಶ್ವತವಾಗಿ ಮೂಗಿಗೆ ಹಾನಿಯಾಗುತ್ತದೆ. ಇದರಿಂದ ಮೂಗಿನಲ್ಲಿ ರಕ್ತ ಬರಬಹುದು.
  3. ಮೂಗಿನ ಕೊಳೆಯನ್ನು ತಿನ್ನುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ ಇದೂ ಕೂಡ ಒಳ್ಳೆಯದಲ್ಲ. ಮೂಗಿಗೆ ಯಾವುದೇ ಬ್ಯಾಕ್ಟೀರಿಯಾ ಹೋಗದಂತೆ ತಡೆಗಟ್ಟಲು ನಮ್ಮ ದೇಹ ಮ್ಯೂಕಸ್ ಉತ್ಪಾದನೆ ಮಾಡುತ್ತದೆ. ಆ ಮ್ಯೂಕಸ್ ಒಣಗಿ ಮೂಗಿನ ಕಸ ಎನಿಸಿಕೊಳ್ಳುತ್ತದೆ. ಬ್ಯಾಕ್ಟೀರಿಯಾ ಹಿಡಿದು ಇಟ್ಟುಕೊಂಡಿರುವ ಕಸವನ್ನು ತಿಂದರೆ ಮತ್ತೆ ಬ್ಯಾಕ್ಟೀರಿಯಾ ಹೊಟ್ಟೆಗೆ ಹೋಗುತ್ತದೆ.
  4. ಮೂಗಿನ ರಂಧ್ರಗಳಿಂದ ಕೂದಲು ಕಿತ್ತುಬಂದು, ಗಾಯಗಳಾಗಿ ಕಡಿತ ಬರಬಹುದು.
  5. ಮೂಗಿನ ಒಳಪದರ ಹಾನಿಯಾಗಿ ಬ್ಯಾಕ್ಟೀರಿಯಾಗಳು ಮೆದುಳಿಗೆ ತಲುಪುತ್ತವೆ. ಇದು ಆಲ್‌ಝೈಮರ‍್ಸ್ ಹಾಗೂ ಕಿವುಡುತನಕ್ಕೆ ಕಾರಣವಾಗಬಹುದು.
  6. ನ್ಯುಮೋನಿಯಾ ಹಾಗೂ ಮೂಳೆ ರೋಗಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ.
  7. ಮೂಗಿಗೆ ಕೈಹಾಕಿದ ನಂತರ ಕೈ ತೊಳೆಯದೇ ಕಣ್ಣು, ಬಾಯಿ ಮುಟ್ಟಿದರೆ ಬ್ಯಾಕ್ಟೀರಿಯಾ ದೇಹದ ಒಳಗೆ ಹೋಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!