ಭರಣಿ ನಕ್ಷತ್ರದ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭರಣಿಯು ಎರಡನೇ ನಕ್ಷತ್ರ ವಾಗಿದೆ. ಶುಕ್ರ ಗ್ರಹವು ಭರಣಿ ನಕ್ಷತ್ರವನ್ನು ಸಂಕೇತಿಸುತ್ತದೆ. ಸಾವಿನ ದೇವತೆಯಾದ ಯಮನು ಭರಣಿ ನಕ್ಷತ್ರವನ್ನು ಆಳುತ್ತಾನೆ. ಭರಣಿ ಎಂದರೆ ಪೋಷಿಸುವವನು ಎಂದರ್ಥ. ಈ ರಾಶಿಯವರು ನಾಯಕತ್ವ ಗುಣಗಳನ್ನು ಹೊಂದಿದವರು. ಹಾಗೂ ಅದ್ಭುತ ಚೈತನ್ಯವನ್ನು ಹೊಂದಿರುತ್ತಾರೆ. ಅಲ್ಲದೇ ಯಾವುದೇ ವಿಚಾರದ ಕುರಿತಾಗಿ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳನ್ನು ನಡೆಸಿ ಮುಂದಡಿ ಇಡುತ್ತಾರೆ.
ಆದರೆ, ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಿಗೆ ತೊಡಕಾಗುವ ವಿಚಾರವೆಂದರೆ, ತಮ್ಮ ಜೀವನ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ವಿಷಯದಲ್ಲಿ ಹೆಚ್ಚಿನ ಗೊಂದಲ ಭಾವನೆಗಳನ್ನು ಹೊಂದಿರುತ್ತಾರೆ. ಇನ್ನೊಂದು ವಿಚಾರವೆಂದರೆ ಈ ರಾಶಿಯವರಿಗೆ ಹಠ ಜಾಸ್ತಿ. ಕಲಿಕೆಯ ವಿಷಯದಲ್ಲಿ ಈ ನಕ್ಷತ್ರದವರು ಉಳಿದ ನಕ್ಷತ್ರದವರಿಗಿಂತ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಭರಣಿಯು ಹಲವಾರು ವಿಶೇಷತೆಗಳನ್ನು ಹೊಂದಿರುವ ನಕ್ಷತ್ರವಾಗಿದ್ದು, ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಗಮನಿಸಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!