October 16, 2026
Friday, October 16, 2026
spot_img

VIRAL | ಬೆಂಗಳೂರಲ್ಲಿ ಎಂಥ ಬಿಸಿಲು ಗೊತ್ತಾ? ಮನೆಯೊಳಗೆ ಇಟ್ಟ ಜಾಗದಲ್ಲೇ ಕರಗಿಹೋದ ಕ್ರಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಷ್ಟು ವರ್ಷಗಳಿಂದ ದೃಷ್ಟಿ ಬೀಳುತ್ತೇನೋ ಎನ್ನುವಂತಿದ್ದ ಬೆಂಗಳೂರು ವೆದರ್‌ಗೆ ನಿಜವಾಗಿಯೂ ದೃಷ್ಟಿ ಬಿದ್ದಿದೆ. ಬೇಸಿಗೆಯ ದಿನಗಳನ್ನು ಕಳೆಯೋಕಾಗದೇ ಬೆಂದಕಾಳೂರಿನ ಜನ ಹೈರಾಣಾಗಿದ್ದಾರೆ.

ಮಹಿಳೆಯೊಬ್ಬರು ಇದಕ್ಕೆ ನಿದರ್ಶನವಾಗುವಂತಹ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಮನೆಯಲ್ಲಿ ಎಸಿ, ಫ್ಯಾನ್‌ ಆನ್‌ ಆಗಿ ಇದ್ದರೂ ಬಣ್ಣದ ಕ್ರಯಾನ್ಸ್‌ ಕರಗಿ ಹೋಗಿದೆ.

https://www.instagram.com/p/DXOgWAZEnIE

ವಿಡಿಯೋವೊಂದು ವೈರಲ್‌ ಆಗಿದ್ದು, ಮಹಿಳೆಯೊಬ್ಬರು ಇಲ್ಲಿ ಮಾತನಾಡುತ್ತಾರೆ. ನಾನು ಎಷ್ಟೊಂದು ವರ್ಷಗಳಿಂದ ಇಲ್ಲಿದ್ದೀನಿ. ಮನೆಯೊಳಗೂ ಸೆಖೆ ಅನ್ನೋದನ್ನು ಈಗ ನೋಡ್ತಿದ್ದೀನಿ. ಮನೆಯೊಳಗೆ ಬಿಸಿಲಿಗೆ ಎಕ್ಸ್‌ಪೋಸ್‌ ಆದ ಟೇಬಲ್‌ ಮೇಲೆ ಮೊಟ್ಟೆ ಹಾಕಿದ್ದಿದ್ದರೆ ಆಮ್ಲೆಟ್‌ ಆಗಿಬಿಡುತ್ತಿತ್ತು.

ಟೇಬಲ್‌ಮೇಲಿರುವ ಕ್ರಯಾನ್ಸ್‌ ನೋಡಿ ಹೇಗೆ ಕರಗಿ ನೀರಿನಂತಾಗಿದೆ ಎಂದು ತೋರಿಸಿದ್ದಾರೆ. ಇದು ಸಣ್ಣ ಸಮಸ್ಯೆ ಎನಿಸಬಹುದು. ಆದರೆ ನಾನು ಬೆಂಗಳೂರು ಬಿಸಿಲಿನ ತೀವ್ರತೆ ತೋರಿಸ್ತಿದ್ದೇನೆ ಅಷ್ಟೆ ಎಂದಿದ್ದಾರೆ.

Must Read