HEALTH | 1 ಸ್ಪೂನ್ ಎಣ್ಣೆಯಲ್ಲಿ ಎಷ್ಟು ಕ್ಯಾಲೋರಿ ಇದೆ ಗೊತ್ತಾ? ಹೆಚ್ಚು ಎಣ್ಣೆ ತಿಂದ್ರೆ ಈ ಸಮಸ್ಯೆ ತಪ್ಪಿದ್ದಲ್ಲ

ಒಂದು ಚಪಾತಿ ಮಾಡೋದಕ್ಕೆ ಎಷ್ಟು ಎಣ್ಣೆ ಬಳಕೆ ಮಾಡ್ತೀರಿ? ಕಲಸುವಾಗ ಎರಡು ಸ್ಪೂನ್, ಲಟ್ಟಿಸುವ ಮುನ್ನ ಅರ್ಧ ಸ್ಪೂನ್ ಹಾಗೂ ಬೇಯಿಸೋದಕ್ಕೆ ಒಂದು ಸ್ಪೂನ್!

ಒಂದು ಸ್ಪೂನ್ ಎಣ್ಣೆ ತಿನ್ನುವ ಬದಲು ಒಂದು ಡ್ರೈ ಚಪಾತಿಯನ್ನೇ ತಿಂದುಬಿಡಬಹುದು. ಒಂದು ಸ್ಪೂನ್ ಎಣ್ಣೆಯಲ್ಲಿ 120 ಕ್ಯಾಲೊರಿ ಇರುತ್ತದೆ. ಹಾಗೇ ಎಣ್ಣೆ ಹಾಕದ ಒಂದು ಚಪಾತಿಯಲ್ಲಿ 104 ಚಪಾತಿ ಇರುತ್ತದೆ. ಎಣ್ಣೆ ಹಾಕಿ ನೀವು ಎರಡು ಚಪಾತಿ ತಿಂದರೆ, ನಾಲ್ಕು ಚಪಾತಿ ತಿಂದಂತೆ ಅರ್ಥ.

ಬರೀ ಒಂದು ಸ್ಪೂನ್ ಎಣ್ಣೆ ಬಗ್ಗೆ ಮಾತನಾಡ್ತಿದ್ದೇವೆ? ಎಣ್ಣೆಯಲ್ಲೇ ಕರಿಯುವ ಆಹಾರದ ಬಗ್ಗೆ ಯೋಚಿಸಿ, ಪೂರಿ, ಸಮೋಸಾ, ಕಚೋರಿ, ಚಿಪ್ಸ್ ಹೀಗೆ..

ಅತಿಯಾಗಿ ಎಣ್ಣೆ ತಿಂದರೆ ದೇಹಕ್ಕೇನಾಗುತ್ತದೆ?

  • ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಬೇಧಿ
  • ಸುಲಭವಾಗಿ ತೂಕ ಹೆಚ್ಚಾಗುತ್ತದೆ, ಬೊಜ್ಜಿನ ದೇಹ ನಿಮ್ಮದಾಗುತ್ತದೆ.
  • ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಸ್ಟ್ರೋಕ್‌ಗೆ ಆಹ್ವಾನ ನೀಡಿದಂತೆ
  • ಡಯಾಬಿಟಿಸ್ ಬರುವ ರಿಸ್ಕ್ ಹೆಚ್ಚು ಮಾಡುತ್ತದೆ.
  • ಮೆದುಳಿನ ಕೆಲಸದ ಜೊತೆ ಆಟ ಆಡುತ್ತದೆ
  • ಮೊಡವೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!