ಯಾವ ನವೋದ್ದಿಮೆಯಲ್ಲಿ ಕೆಲಸ ಮಾಡೋಕೆ ಯುವಜನರ ಆಸಕ್ತಿ ಗೊತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್

ನವೋದ್ದಿಮೆಗಳಲ್ಲಿ ಕೆಲಸ ಮಾಡುವುದು ಅನ್ನೋದು ಯುವಜನರ ಒಂದು ವರ್ಗದಲ್ಲಿ ಈಗ ಆಕರ್ಷಕ ಸಂಗತಿ. ಹಾಗಾದರೆ ಅಗ್ರ ಪ್ರತಿಭೆಗಳನ್ನು ನವೋದ್ದಿಮೆ ವಿಭಾಗದಲ್ಲಿ ಸೆಳೆಯುತ್ತಿರುವ ಭಾರತದ ಸ್ಟಾರ್ಟಪ್ ಗಳು ಯಾವವು?

ಕಳೆದ ಮಂಗಳವಾರ ಚಿರಪರಿಚಿತ ಉದ್ಯೋಗಸೇವೆ ತಾಣವಾಗಿರುವ ಲಿಂಕ್ಡ್ ಇನ್, ಟಾಪ್ 25 ನವೋದ್ದಿಮೆಗಳ ಪಟ್ಟಿಯನ್ನು ಪ್ರಕಟಿಸಿದೆ. ಆ ಪೈಕಿ ಪ್ರತಿಭಾವಂತ ಅಭ್ಯರ್ಥಿಗಳು ತಮ್ಮ ಕೆಲಸ ಪಡೆಯಲು ಇಚ್ಚಿಸುವ ನವೋದ್ದಿಮೆಗಳ ಪೈಕಿ ಕ್ರೆಡ್, ಅಪ್ ಗ್ರಾಡ್, ಗ್ರೊವ್, ಜೆಪ್ಟೊ ಮುಂಚೂಣಿಯಲ್ಲಿವೆ.

50ಕ್ಕೂ ಹೆಚ್ಚು ಉದ್ಯೋಗಿಗಳಿರುವ ನವೋದ್ದಿಮೆಗಳನ್ನು ಈ ಸಮೀಕ್ಷೆಗೆ ಪರಿಗಣಿಸಲಾಗಿದ್ದು, ನವೋದ್ದಿಮೆಗಳು ಪ್ರತಿಭೆಗಳನ್ನು ಆಕರ್ಷಿಸುವ ಹಾಗೂ ತಮ್ಮಲ್ಲೇ ಉಳಿಸಿಕೊಳ್ಳುವ ಸಾಮರ್ಥ್ಯ ಎಷ್ಟರಮಟ್ಟಿಗೆ ಹೊಂದಿವೆ ಎಂಬುದನ್ನು ಮೌಲ್ಯಮಾಪನ ಮಾಡಿ ಪಟ್ಟಿ ಪ್ರಕಟಿಸಲಾಗಿದೆ.
ಇನ್ನೂ ಬೇರೆ 25 ಕಂಪನಿಗಳು ಈ ಪಟ್ಟಿಯಲ್ಲಿವೆ. ಭಾರತವು ಈ ವರ್ಷ ಯುನಿಕಾರ್ನ್ ಕಂಪನಿಗಳು ಅಂದರೆ ನೂರು ಬಿಲಿಯನ್ ಡಾಲರ್ ಮೌಲ್ಯದ ನವೋದ್ದಿಮೆಗಳ ವಿಭಾಗದಲ್ಲಿ ಶೇ.65ರ ಬೆಳವಣಿಗೆ ಸಾಧಿಸಿದೆ. ಅದಾಗಲೇ ಇಂಥ 106 ಯುನಿಕಾರ್ನ್ ಗಳು ಭಾರತದಲ್ಲಿದ್ದು, ಇನ್ನು ಕೆಲವೇ ವರ್ಷಗಳಲ್ಲಿ 122 ಯುನಿಕಾರ್ನ್ ಗಳನ್ನು ಸೇರಿಸಿಕೊಳ್ಳಲಿದೆ ಎಂಬುದು ಒಂದು ಅಂದಾಜು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!