ಕಾರುಗಳಲ್ಲಿ 6 ಏರ್ ಬ್ಯಾಗ್ ಕಡ್ಡಾಯ ನಿಯಮ ಯಾವಾಗ ಜಾರಿ?: ಈ ಕುರಿತು ನಿತಿನ್ ಗಡ್ಕರಿ ಕೊಟ್ರು ಮಹತ್ವದ ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಂಟು ಸೀಟುಗಳನ್ನು ಹೊಂದಿರುವ ಕಾರುಗಳಲ್ಲಿ 6 ಏರ್ ಬ್ಯಾಗ್ ಹೊಂದಿರುವುದು ಕಡ್ಡಾಯ ಎಂಬ ನಿಯಮವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈಗಾಗಲೇ ಪ್ರಕಟಿಸಿದ್ದು, ಇದೀಗ ಈ ನಿಯಮ ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ವಾಹನಗಳಲ್ಲಿ ಸಂಚರಿಸುವಾಗ ಎಲ್ಲಾ ಪ್ರಯಾಣಿಕರ ಸುರಕ್ಷತೆ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಾರುಗಳಲ್ಲಿ ಕನಿಷ್ಠ ಆರು ಏರ್ ಬ್ಯಾಗ್ ಗಳು ಇರಬೇಕು ಎಂಬ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಗಡ್ಕರಿ ಹೇಳಿದರು.

ಈ ಹಿಂದೆ ಅಕ್ಟೋಬರ್ 1, 2022 ರಿಂದ ಉತ್ಪಾದನೆಯಾಗಿರುವ ವಾಹನಗಳಲ್ಲಿ ಇದನ್ನು ಅಳವಡಿಸಬೇಕು ಎಂದು ಸೂಚಿಸಲಾಗಿತ್ತು.ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 14, 2022 ರಲ್ಲಿ ಈ ಕುರಿತ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಇದೀಗ ಈಗ ಈ ದಿನಾಂಕವನ್ನು ಮುಂದೂಡಲಾಗಿದ್ದು, ಸರಣಿ ಟ್ವೀಟ್ ಗಳ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಹೊಸ ನಿಯಮ ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದು, ಇದರಿಂದಾಗಿ ಇನ್ನೂ ಒಂದು ವರ್ಷಗಳ ಕಾಲ ಅವಕಾಶ ಸಿಕ್ಕಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!