Sunday, February 5, 2023

Latest Posts

ಭಾರತೀಯರು 2022ರಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ಗೂಗಲ್‌ ಮಾಡಿದ್ದಾರೆ ಗೊತ್ತಾ? ಇಲ್ಲಿವೆ ಟಾಪ್‌ 10 ವಿಷಯಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂಟರ್ನೆಟ್‌ ಸೇವೆಯು ಕೈಗೆಟಕುವ ದರದಲ್ಲಿ ಲಭ್ಯವಾಗಲು ಪ್ರಾರಂಭವಾಗಿ ಪ್ರತಿಯೊಬ್ಬರೂ ಸ್ಮಾರ್ಟ್‌ ಫೋನ್‌ಬಳಸಲು ಪ್ರಾರಂಭಿಸಿದಾಗಿನಿಂದ ಗೂಗಲ್‌ ಸರ್ಚ್‌ ಎಂಜಿನ್‌ ಇಂದು ಜಗತ್ತಿನ ಬಹುತೇಕರ ನೆಚ್ಚಿನ ಹುಡುಕಾಟದ ತಾಣವಾಗಿದೆ. ಯಾವುದೇ ವಿಷಯ, ವಸ್ತು, ವ್ಯಕ್ತಿ, ಘಟನೆ ಹೀಗೆ ಏನೇ ಇದ್ದರೂ ಅದರ ಕುರಿತು ತಿಳಿದುಕೊಳ್ಳಲು ಬಹುತೇಕರು ಮೊಟ್ಟಮೊದಲು ಮಾಡುವ ಕೆಲಸವೆಂದರೆ ಗೂಗಲ್‌ ಹುಡುಕಾಟ. ಗೂಗಲ್‌ ಮಾಡುವುದು ಹುಡುಕಾಟದ ಉಪಮೆಯಾಗಿ ಹೋಗುವಷ್ಟರ ಮಟ್ಟಿಗೆ ಇಂದು ಗೂಗಲ್‌ ಸರ್ಚ್‌ ಇಂಜಿನ್‌ ಮೇಲೆ ಜನರು ಅವಲಂಬಿತರಾಗಿದ್ದಾರೆ. ಹೀಗೆ ಜನರು ಸಾವಿರಾರು ವಿಷಯಗಳ ಕುರಿತಾಗಿ ಗೂಗಲ್‌ ಮಾಡುತ್ತಾರೆ. ಅವುಗಳಲ್ಲಿ ಪ್ರತಿ ವರ್ಷವೂ ಅತಿ ಹೆಚ್ಚು ಸರ್ಚ್‌ ಮಾಡಲ್ಪಟ್ಟ ವಿಷಯಗಳ ಕುರಿತಾದ ಮಾಹಿತಿ ಲಭ್ಯವಾಗುತ್ತದೆ. ಕೆಲವೊಮ್ಮೆ ನಮಗೆ ತೀರಾ ಸಾಧಾರಣ ಅನ್ನಿಸುವ ವಿಷಯಗಳೇ ಗೂಗಲ್‌ ನಲ್ಲಿ ಅತಿ ಹೆಚ್ಚು ಬಾರಿ ಸರ್ಚ್‌ ಮಾಡಲ್ಪಟ್ಟಿರುತ್ತೆ. ಪ್ರಸ್ತುತ 2022ರ ಡಿಸೆಂಬರ್‌ ಅಂದರೆ ವರ್ಷ ಕೊನೆಗೊಳ್ಳುವ ತಿಂಗಳಿನಲ್ಲಿ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್‌ 10 ವಿಷಯಗಳ ಪಟ್ಟಿ ಇಲ್ಲಿದೆ.

1.IPL
ಹೌದು.. 2022ರಲ್ಲಿ ಗೂಗಲ್‌ ನಲ್ಲಿ ಅತಿ ಹೆಚ್ಚು ಬಾರಿ ಸರ್ಚ್‌ ಮಾಡಲ್ಪಟ್ಟ ವಿಷಯಗಳಲ್ಲಿ ಮೊದಲಸ್ಥಾನದಲ್ಲಿ ಇಂಡಿಯನ್‌ ಪ್ರಿಮೀಯರ್‌ ಲೀಗ್‌ ಇದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಲೀಗ್‌ ಎಂದು ಕರೆಸಿಕೊಳ್ಳುವ ಐಪಿಎಲ್‌ ಬಗ್ಗೆ ಭಾರತೀಯರು ಈ ವರ್ಷ ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

2.CoWIN
ಎರಡನೇಯ ಸ್ಥಾನದಲ್ಲಿ CoWIN ಪ್ಲಾಟ್‌ ಫಾರ್ಮ್‌ ಇದೆ. ಕೋವಿಡ್‌ ವ್ಯಾಕ್ಸೀನ್ ಕುರಿತಾದ ಸಮಗ್ರ ಮಾಹಿತಿಯನ್ನೊಳಗೊಂಡ ಭಾರತೀಯ ಸರ್ಕಾರದ ವೆಬ್‌ ಸೈಟ್‌ ಇದು.

3. FIFA
ಪ್ರಸ್ತುತ ಕತಾರ್‌ ನಲ್ಲಿ ನಡೆಯುತ್ತಿರೋ ಫುಟ್ಬಾಲ್‌ ವಿಶ್ವಕಪ್‌ ಫೀಫಾ ಕುರಿತಾಗಿ ಅತಿ ಹೆಚ್ಚು ಭಾರತೀಯರು ಆಸಕ್ತಿ ತೋರಿದ್ದಾರೆ. ಹಾಗಾಗಿಯೇ ಫೀಫಾ ವಿಷಯವು ಮೂರನೇ ಅತಿ ಹೆಚ್ಚು ಹುಡುಕಾಡಲ್ಪಟ್ಟ ವಿಷಯವಾಗಿದೆ.

4.ಏಷ್ಯಾಕಪ್‌
ಏಷ್ಯಾದ ದೇಶಗಳ ನಡುವೆ ನಡೆಯುವ ಕ್ರಿಕೆಟ್‌ ಪಂದ್ಯಾವಳಿಯು ಅನೇಕ ಭಾರತೀಯರ ಆಸಕ್ತಿಯ ವಿಷಯ. ಹೀಗಾಗಿಯೇ ಈ ವಿಷಯ ಟಾಪ್‌ ಸರ್ಚ್‌ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ.

5.ಐಸಿಸಿ ಟಿ-20 ವಿಶ್ವಕಪ್‌
ಈ ವರ್ಷ ನಡೆದ ಐಸಿಸಿ ಟಿ-20 ವಿಶ್ವಕಪ್‌ ಕುರಿತು ಗೂಗಲ್‌ ನಲ್ಲಿ ಲಕ್ಷಾಂತರ ಮಂದಿ ಸರ್ಚ್‌ ಮಾಡಿದ್ದರು. ಭಾರತ ವಿಶ್ವಕಪ್‌ ಗೆಲ್ಲಲಿಲ್ಲವೆಂಬುದು ಬೇರೆ ಮಾತು. ಆದರೆ ವಿಶ್ವಕಪ್‌ ಪಂದ್ಯಾಟದ ಕುರಿತಾಗಿ ಗೂಗಲ್‌ ನಲ್ಲಿ ಮಾತ್ರ ಸಿಕ್ಕಾಪಟ್ಟೆ ಸರ್ಚ್‌ ಮಾಡಲಾಗಿದೆ.

6.ಬ್ರಹ್ಮಾಸ್ತ್ರ-1
ರಣಬೀರ್-ಆಲಿಯಾ ಅಭಿನಯದ ಬಾಲಿವುಡ್‌ ಚಿತ್ರ ಬ್ರಹ್ಮಾಸ್ತ್ರದ ಬಗ್ಗೆ ಗೂಗಲ್‌ ನಲ್ಲಿ ಅತಿ ಹೆಚ್ಚು ತಡಕಾಡಲಾಗಿದೆ. ಮಾರ್ವೆಲ್ ಸೂಪರ್‌ ಹೀರೋ ಯುನಿವರ್ಸ್‌ನಂತೆ ಭಾರತದ ಅಸ್ತ್ರಾವರ್ಸ್‌ ಎಂಬ ಸುಪರ್‌ ನ್ಯಾಚುರಲ್‌ ವಿಷಯದ ಕುರಿತಾಗಿ ಭಾರತೀಯರು ಕುತೂಹಲ ತೋರಿದ್ದಾರೆ

7.ಇ-ಶ್ರಮ್‌ ಕಾರ್ಡ್‌
ಆಶ್ಚರ್ಯಕರವೆಂಬಂತೆ ಸರ್ಕಾರಿ ಯೋಜನೆಯೊಂದರ ಕುರಿತಾಗಿಯೂ ಗೂಗಲ್‌ ನಲ್ಲಿ ಅತಿ ಹೆಚ್ಚು ಬಾರಿ ಹುಡುಕಾಡಲಾಗಿದೆ. ಅಸಂಘಟಿತ ಕಾರ್ಮಿಕ ವಲಯದವರಿಗೆ ಆರ್ಥಿಕ ಸಹಾಯ ನೀಡಲು ಸರ್ಕಾರ ಜಾರಿಗೆ ತಂದಿರುವ ಯೋಜನೆ ಇ-ಶ್ರಮ್‌ ಕಾರ್ಡ್‌ ಬಗ್ಗೆ ಹಲವರು ಗೂಗಲ್‌ ಮಾಡಿದ್ದಾರೆ. ಹಾಗಾಗಿ ಇದೂ ಕೂಡ ಸರ್ಚ್ ಟ್ರೆಂಡ್‌ ವಿಷಯಗಳ‌ ಸಾಲಿಗೆ ಸೇರಿದೆ.

8.ಕಾಮನ್‌ ವೆಲ್ತ್‌ ಗೇಮ್ಸ್‌
ಪ್ರಪಂಚದ 72 ಕಾಮನ್‌ ವೆಲ್ತ್‌ ದೇಶಗಳ ನಡುವೆ ನಡೆಯುವ ಕ್ರೀಡೋತ್ಸವ ಕಾಮನ್‌ ವೆಲ್ತ್‌ ಗೇಮ್ಸ್‌ ಗಳ ಕುರಿತಾಗಿಯೂ 2022ರಲ್ಲಿ ಅತಿ ಹೆಚ್ಚು ಬಾರತೀಯರು ಗೂಗಲ್‌ ನಲ್ಲಿ ಹುಡುಕಾಡಿದ್ದಾರೆ.

9.ಕೆಜಿಎಫ್-‌2
ಇಷ್ಟೆಲ್ಲಾ ವಿಷಯಗಳ ಮಧ್ಯೆ ಕನ್ನಡದ ಪ್ಯಾನ್‌ ಇಂಡಿಯಾ ಸಿನೆಮಾ ಕೆಜಿಎಫ್‌ ಚಾಪ್ಟರ್-2‌ ಕೂಡ ಸ್ಥಾನ ಗಳಿಸಿದೆ. ಟ್ರೇಲರ್ವ ರಿಲೀಸ್‌ ಆದಾಗಲೇ ಮಿಲಿಯನ್‌ ಗಟ್ಟಲೇ ಮೆಚ್ಚುಗಳಿಸಿದ್ದ ಈ ಚಿತ್ರ ದೇಶದಲ್ಲಿಯೇ ಅತಿ ಹೆಚ್ಚು ಬಾರಿ ಗೂಗಲ್‌ ಮಾಡಲ್ಪಟ್ಟಿದೆ.

10.ಇಂಡಿಯನ್‌ ಸೂಪರ್‌ ಲೀಗ್‌
ಭಾರತದ ಫುಟ್ಬಾಲ್‌ ಕ್ಲಬ್‌ ಗಳ ಮಧ್ಯೆ ನಡೆಯುವ ಇಂಡಿಯನ್‌ ಸೂಪರ್‌ ಲೀಗ್‌ ಪಂದ್ಯಾಟದ ಕುರಿತು ಅನೇಕರು ಗೂಗಲ್‌ ಸರ್ಚ್‌ ಮಾಡಿದ್ದಾರೆ. ಹೀಗಾಗಿಯೇ ಇದು ಟಾಪ್‌ 10ರ ಪಟ್ಟಿಯಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!