ನವ ಕರ್ನಾಟಕ ಅಕಾಡೆಮಿಗೆ ಪೂರಕ ಬೆಂಬಲ ನೀಡಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ ಹುಬ್ಬಳ್ಳಿ:

ಚಲನಚಿತ್ರೋತ್ಸವಗಳು ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದವು‌, ಅದನ್ನು ಟೂ ಟೈರ್ ಸಿಟಿಗೆ ತರುವ ಕೆಲಸವನ್ನು ನವಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ಮಾಡಿದೆ. ಇದಕ್ಕೆ ಉತ್ತರ ಕರ್ನಾಟಕ ಭಾಗದ ಕಲಾವಿದರು ಹಾಗೂ ಸಾರ್ವಜನಿಕರು ಪೂರಕವಾಗಿ ಬೆಂಬಲ ನೀಡಬೇಕೆಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಇಂದಿನಿಂದ ಡಿ. 10 ರವರೆಗೆ ನಡೆಯಲಿರುವ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- 2022 ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ನವ ಕರ್ನಾಟಕ ಅಕ್ಯಾಡೆಮಿ ಹೊಸ ಸಾಹಸ ಮಾಡತ್ತಾ ಇದೆ. ನಾನು ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರು ನಗರ ಹೊರತುಪಡಿಸಿ ಬೇರೆ ಕಡೆಗೆ ಕೈಗಾರಿಕಾ ಸೇರಿದಂತೆ ಇನ್ನಿತರ ಚಟುವಟಿಕೆಗಳು ಪಡೆಯಬೇಕೆಂಬ ಕನಸು ಹೊಂದಿದೆ. ಅದರಂತೆ ಡಾ.ಎಮ್.ಎ.ಮುಮ್ಮಿಗಟ್ಟಿ ಹುಬ್ಬಳ್ಳಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುವ ಪ್ರಯತ್ನ ಮಾಡಿದ್ದಾರೆ. ಅವರ ದಿಟ್ಟ ಹೆಜ್ಜೆಗೆ ಅಭಿನಂದನೆ ಎಂದರು.

ಕನ್ನಡ ಚಲನಚಿತ್ರ ಬೆಳೆಯುತ್ತಿದೆ. ರಾಷ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಲನಚಿತ್ರಗಳು ಅತಿಹೆಚ್ಚು ಗಳಿಕೆ ಮಾಡುತ್ತಿವೆ. ಈ ಹಿಂದೆ ಕನ್ನಡ ಸಿನಿಮಾಗಳು ರಾಜ್ಯ ಬಿಟ್ಟು ಹೊರರಾಜ್ಯಕ್ಕೆ ಹೋಗತ್ತಾ ಇರಲಿಲ್ಲ. ಆದರೆ ಇದೀಗ ಕನ್ನಡ ಚಿತ್ರಕ್ಕೆ ಬಹುಬೇಡಿಕೆ ಇದೆ. ಉತ್ತಮ ಸಿನಿಮಾ ಬಂದಲ್ಲಿ ವೀಕ್ಷಕರು ಪ್ರೋತ್ಸಾಹ ನೀಡಯೇ ನೀಡುತ್ತಾರೆ. ಹಾಗಾಗಿ ಉತ್ತಮ ಕಥೆಯುಳ್ಳ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣವಾಗಲಿ. ಇದರ ಜೊತೆಗೆ ಚಲನಚಿತ್ರೋತ್ಸವ ಚಟುವಟಿಕೆಗಳು ಸಹ ಹೆಚ್ಚಾಗಬೇಕು. ಮೂರು ದಿನಗಳ ಕಾಲ ನಡೆಯುವ ಸಿನಿಮಾ ಪ್ರದರ್ಶನ ಯಶಸ್ವಿಯಾಗಲಿ ಎಂದರು.

ಇದೇ ಸಂದರ್ಭದಲ್ಲಿ ದಿವಂಗತ ಪುನೀತ್ ರಾಜಕುಮಾರ ಅವರಿಗೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಿರಿಯ ನಟಿ ದಿವ್ಯಾ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಸುನಿಲ ಪುರಾಣಿಕ, ಉದ್ಯಮಿಗಳಾದ ವಿಜೇತ ಸೈಗಲ್, ಕಲ್ಮೇಶ ಹಾವೇರಿಪೇಟ, ವಿಶ್ವನಾಥ ಪಲ್ಲೇದ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!