ಅಷ್ಟೆಲ್ಲಾ ಕಷ್ಟ ಆದರೂ ಆತ ತನ್ನ ಕರ್ತವ್ಯ ಮಾಡಿದ್ದು ಯಾಕೆ ಗೊತ್ತಾ?

ಒಂದು ಬೆಕ್ಕು ಪೈಪ್‌ನೊಳಗೆ ಸಿಕ್ಕಿಹಾಕಿಕೊಂಡು ಹೊರಬರಲಾರದೆ ದಿನಗಳಿಂದ ಒದ್ದಾಡ್ತಾ ಇತ್ತು. ಭಾರೀ ಒಳ್ಳೆ ಮನಸ್ಸಿನ ಜನ ಅದಕ್ಕೆ ಊಟ, ಹಾಲು ಅಲ್ಲೇ ಕೊಡ್ತಾ ಇದ್ರು. ಆದರೆ ಯಾರೂ ಅದನ್ನು ಹೊರಗೆ ತೆಗೆಯೋಕೆ ಪ್ರಯತ್ನ ಮಾಡಲಿಲ್ಲ.

ಪ್ರಯತ್ನ ಮಾಡಿದವರೆಲ್ಲ ಅದರಿಂದ ಪರಚಿಸಿಕೊಂಡು ರಕ್ತ ಬರಿಸಿಕೊಂಡಿದ್ರು. ನಮಗ್ಯಾಕೆ ಅಂದುಕೊಂಡು ಮುಂದೆ ಹೋದರು. ಆದರೆ ವ್ಯಕ್ತಿಯೊಬ್ಬ ಅದನ್ನು ಹೊರತೆಗೆಯಲು ಮುಂದಾದ. ಬೆಕ್ಕು ಮಾಮೂಲಿ ಅವನನ್ನೂ ಪರಚಿ ಹಾಕಿತು.

ಆತ ಅದನ್ನು ಅಲ್ಲೇ ಬಿಟ್ಟು ಹೋದ. ಮತ್ತೆ ಮರುದಿನ ಬಂದ. ತೆಗೆಯಲು ಯತ್ನಿಸಿದ. ಮತ್ತೆ ಪರಚಿತು. ಹೀಗೆ ಮಾಡುತ್ತಾ ಒಂದು ದಿನ ಬೆಕ್ಕು ಹೊರ ಬಂದಿತು, ತಕ್ಷಣವೇ ಓಡಿ ಹೋಯ್ತು.

ಇದನ್ನು ಗಮನಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ, ಅಷ್ಟೆಲ್ಲಾ ಕಾಟ ಕೊಟ್ಟ ಬೆಕ್ಕನ್ನು ಯಾಕೆ ಸೇವ್ ಮಾಡಿದ್ರಿ ಎಂದು ಕೇಳಿದ. ಅದಕ್ಕೆ ಆತ ಹೇಳಿದ ಬೆಕ್ಕಿನ ಗುಣ ಎಲ್ಲರನ್ನು ಪರಚೋದು, ಆದರೆ ಮನುಷ್ಯ ಗುಣ ಏನು? ಸಹಿಸೋದು, ಮಾನವೀಯತೆ ತೋರೋದು ಅದನ್ನೇ ನಾನು ಮಾಡಿದೆ ಎಂದ.

ಹೌದಲ್ವ? ಅದರ ಗುಣ ಅದು ತೋರಿಸುತ್ತದೆ. ಆದರೆ ಮಾನವೀಯತೆ ಎಂದಿಗೂ ಮರೆಯಬೇಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!