ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಕಸ್ತೂರಿ ಅರಿಶಿನವನ್ನು ಸೌಂದರ್ಯ ವರ್ಧನೆಗಾಗಿ ಬಳಸಲಾಗುತ್ತಿದೆ. ನಾವು ಅಡುಗೆಗೆ ಬಳಸುವ ಸಾಮಾನ್ಯ ಅರಿಶಿನಕ್ಕೂ ಮತ್ತು ಕಸ್ತೂರಿ ಅರಿಶಿನಕ್ಕೂ ತುಂಬಾ ವ್ಯತ್ಯಾಸವಿದೆ. ಕಸ್ತೂರಿ ಅರಿಶಿನವು ಮುಖಕ್ಕೆ ಹಳದಿ ಬಣ್ಣವನ್ನು ಬಿಡುವುದಿಲ್ಲ ಮತ್ತು ಚರ್ಮಕ್ಕೆ ಯಾವುದೇ ಉರಿ ಉಂಟುಮಾಡುವುದಿಲ್ಲ. ಇದರಲ್ಲಿರುವ ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಮುಖದ ಹತ್ತಾರು ಸಮಸ್ಯೆಗಳನ್ನು ಬುಡಸಹಿತ ನಿವಾರಿಸುತ್ತವೆ. ಕಸ್ತೂರಿ ಅರಿಶಿನದ ಪ್ರಯೋಜನಗಳು ಮತ್ತು ಅದನ್ನು ಬಳಸುವ ಸರಿಯಾದ ವಿಧಾನವನ್ನು ತಿಳಿಯೋಣ.
ಮುಖದ ಅನಗತ್ಯ ಕೂದಲಿನ ನಿವಾರಣೆಗೆ
ಮುಖದ ಮೇಲೆ ಬರುವ ಸಣ್ಣ ಸಣ್ಣ ಅನಗತ್ಯ ಕೂದಲುಗಳು ಮಹಿಳೆಯರ ಸೌಂದರ್ಯವನ್ನು ಮರೆಮಾಡುತ್ತವೆ. ಥ್ರೆಡ್ಡಿಂಗ್ ಅಥವಾ ವ್ಯಾಕ್ಸಿಂಗ್ ಮಾಡುವುದರಿಂದ ಚರ್ಮ ಹಾನಿಯಾಗಬಹುದು. ಆದರೆ ಕಸ್ತೂರಿ ಅರಿಶಿನ ಇದಕ್ಕೆ ನೈಸರ್ಗಿಕ ಮತ್ತು ನೋವಿಲ್ಲದ ಪರಿಹಾರ ನೀಡುತ್ತದೆ. ಹಾಗಾಗಿ ಒಂದು ಚಮಚ ಕಸ್ತೂರಿ ಅರಿಶಿನ ಪುಡಿಗೆ ಸ್ವಲ್ಪ ಕಡ್ಲೆಹಿಟ್ಟು ಮತ್ತು ಹಸಿ ಹಾಲನ್ನು ಸೇರಿಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಒಣಗಲು ಬಿಡಬೇಕು. ನಂತರ ಕೂದಲಿನ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ನಿಧಾನವಾಗಿ ಉಜ್ಜಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲಿನ ಬೆಳವಣಿಗೆ ಶಾಶ್ವತವಾಗಿ ಕುಂಠಿತವಾಗುತ್ತದೆ.
ಮುಖದ ಕಪ್ಪು ಕಲೆ ನಿವಾರಣೆ
ಬಿಸಿಲು ಮತ್ತು ಮೊಡವೆಗಳಿಂದ ಮೂಡುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕಸ್ತೂರಿ ಅರಿಶಿನ ಅತ್ಯುತ್ತಮ ಮನೆಮದ್ದಾಗಿದೆ. ಇದು ಚರ್ಮದ ನೈಸರ್ಗಿಕ ಬಣ್ಣವನ್ನು ಮರಳಿ ನೀಡುತ್ತದೆ. ಒಂದು ಚಮಚ ಕಸ್ತೂರಿ ಅರಿಶಿನಕ್ಕೆ ಒಂದು ಚಮಚ ಟೊಮೆಟೊ ರಸ ಅಥವಾ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ. ಕಲೆಗಳಿರುವ ಜಾಗಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮದ ಬಣ್ಣವನ್ನು ಸಮನಾಗಿಸುತ್ತದೆ.
ಮೊಡವೆ ಮತ್ತು ಜಿಡ್ಡು ಚರ್ಮಕ್ಕೆ ಮುಕ್ತಿ
ಇದನ್ನೂ ಓದಿ:
ಕಸ್ತೂರಿ ಅರಿಶಿನವು ಚರ್ಮದಲ್ಲಿ ಅತಿಯಾಗಿ ಉತ್ಪತ್ತಿಯಾಗುವ ಜಿಡ್ಡಿನಂಶವನ್ನು ನಿಯಂತ್ರಿಸುತ್ತದೆ ಮತ್ತು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಒಂದು ಚಮಚ ಕಸ್ತೂರಿ ಅರಿಶಿನ ಪುಡಿಗೆ ಒಂದು ಚಮಚ ಶ್ರೀಗಂಧದ ಪುಡಿ ಮತ್ತು ಗುಲಾಬಿ ಜಲ ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ. ಇದನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಮೊಡವೆಗಳು ಮಾಯವಾಗಿ ಮುಖ ಕಾಂತಿಯುತವಾಗುತ್ತದೆ.
ಕಣ್ಣಿನ ಕೆಳಗಿನ ಕಪ್ಪು ಕಲೆಗೆ ಬ್ರೇಕ್
ಆಯಾಸ ಮತ್ತು ನಿದ್ದೆಯ ಕೊರತೆಯಿಂದ ಕಣ್ಣಿನ ಸುತ್ತ ಮೂಡುವ ಕಪ್ಪಾಗುವಿಕೆಯನ್ನು ಕಸ್ತೂರಿ ಅರಿಶಿನವು ಬೇಗನೆ ಕಡಿಮೆ ಮಾಡುತ್ತದೆ. ಕಸ್ತೂರಿ ಅರಿಶಿನಕ್ಕೆ ಸ್ವಲ್ಪ ಮಜ್ಜಿಗೆ ಅಥವಾ ಮೊಸರು ಸೇರಿಸಿ ಕಣ್ಣಿನ ಸುತ್ತ ಮೆಲ್ಲನೆ ಹಚ್ಚಿ, 10 ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಇದು ಕಣ್ಣಿನ ಭಾಗಕ್ಕೆ ತಂಪು ನೀಡುತ್ತದೆ.



