ಟ್ಯಾಟೂ ಹಾಕಿಸಿಕೊಂಡವರು ಆರು ತಿಂಗಳವರೆಗೆ ರಕ್ತದಾನ ಮಾಡುವಂತಿಲ್ಲ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಟ್ಯಾಟೂ ಫ್ಯಾಷನ್ ಹೆಚ್ಚಾಗಿದೆ. ತಮ್ಮ ಇಷ್ಟದ ಡಿಸೈನ್ ಟ್ಯಾಟೂ ಹಾಕಿಸೋದು ಒಂದು ಕ್ರೇಜ್. ಟ್ಯಾಟೂ ನೋಡೋಕೆ ಎಷ್ಟು ಚಂದವೋ ಯಾಮಾರಿದರೆ ಅಷ್ಟೇ ಕಷ್ಟ. ಟ್ಯಾಟೂ ಹಾಕಿಸಿಕೊಳ್ಳುವ ಸೂಜಿ ಬಗ್ಗೆ ಅತಿಯಾದ ಜಾಗರೂಕತೆ ವಹಿಸಬೇಕಾಗುತ್ತದೆ.

ಹೆಚ್.ಐ.ವಿ, ಹೆಪಟಿಟಿಸ್ ಹಾಗೂ ಅನುವಂಶಿಕ ಕಾಯಿಲೆಗಳು ಬರುವ ಸಾಧ್ಯತೆ ಟ್ಯಾಟೂವಿನಿಂದ ಹೆಚ್ಚಾಗುತ್ತದೆ. ಟ್ಯಾಟೂ ಹಾಕಿಸಿದವರು ಆರು ತಿಂಗಳು ರಕ್ತದಾನ ಮಾಡುವಂತಿಲ್ಲ. ಏಕೆಂದರೆ ಅವರು ನೀಡುವ ರಕ್ತದಲ್ಲಿ ಸೋಂಕಿನ ಅಪಾಯ ಇದೆ.

ಸೂಕ್ಷ್ಮವಾದ ಸೂಜಿ ಬಳಕೆ ಮಾಡಿ ಟ್ಯಾಟೂ ಹಾಕಲಾಗುತ್ತದೆ. ಇದರಿಂದ ಎಷ್ಟೋ ಮಂದಿ ಇನ್ಫೆಕ್ಷನ್ ಎದುರಿಸಿದ್ದಾರೆ. ಇವರು ಟ್ಯಾಟೂ ಹಾಕಿಸಿದ್ದನ್ನು ಮುಚ್ಚಿಟ್ಟು ರಕ್ತ ನೀಡಿದರೆ, ರಕ್ತ ಪಡೆದ ರೋಗಿಗೂ ಸಮಸ್ಯೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!