ಭೀಕರವಾಗಿ ಕೊಲೆಯಾದ ನೇಹಾ ಫಯಾಜ್‌ನ ಲವ್‌ ಮಾಡ್ತಿದ್ರಾ? ಫೋಟೊಸ್‌ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹುಬ್ಬಳ್ಳಿಯ ಬಿಬಿವಿ ಕಾಲೇಜು ಆವರಣದಲ್ಲಿ ಅಮಾನುಷವಾಗಿ ಹತ್ಯೆಗೀಡಾದ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಾಗೂ ಪಾತಕಿ ಫಯಾಜ್ ಪ್ರೀತಿಸುತ್ತಿದ್ದರಾ ಎನ್ನುವ ಅನುಮಾನಗಳು ಕಾಡುತ್ತಿದೆ.

ಅದರಂತೆಯೇ ನೇಹಾ ಹಾಗೂ ಫಯಾಜ್‌ ಫೋಟೊಗಳು ಹಾಗೂ ವಿಡಿಯೋ ವೈರಲ್‌ ಆಗಿವೆ. ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷರಾದ ರೇಖಾ ಶ್ರೀನಿವಾಸ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ ಮಾತನಾಡಿರುವ ಪಾತಕಿ ತಾಯಿ ಮುಮ್ತಾಜ್, ನನ್ನ ಮಗ ಹಾಗೂ ನೇಹಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನೇಹಾಳೇ ಫಯಾಜ್‌ಗೆ ಮೊದಲು ಪ್ರಪೋಸ್‌ ಮಾಡಿದ್ದಳು. ನನಗೆ ಒಂದು ವರ್ಷದ ಹಿಂದೆಯೇ ಈ ವಿಷಯ ಗೊತ್ತಾಗಿತ್ತು ಎಂದಿದ್ದಾರೆ.

ನೇಹಾ ಮದುವೆಯಾಗುವುದಕ್ಕೆ ಒಪ್ಪದೇ ಬ್ರೇಕಪ್‌ ಮಾಡಿಕೊಂಡ ನಂತರದಿಂದ ಫಯಾಜ್‌ ಆಕೆಗೆ ಹಲವು ಬಾರಿ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ನೇಹಾ ಪೋಷಕರಿಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಫಯಾಜ್‌ ನೇಹ ಪೋಷಕರ ಬಳಿ ಮದುವೆ ಮಾಡಿಕೊಡಿ ಎಂದು ಮನವಿ ಮಾಡಿದ್ದು, ಪೋಷಕರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!