July 21, 2026
Tuesday, July 21, 2026
spot_img

ಇರುವ ಸಮಸ್ಯೆಗಳ ಮಧ್ಯೆ ಕೋವಿಡ್‌ ಬಗ್ಗೆ ತಲೆಕೆಡಿಸಿಕೊಳ್ಳಬೇಕಾ? ಸಚಿವ ಯು.ಟಿ ಖಾದರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರದಲ್ಲಿ ಕೋವಿಡ್‌ಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಆಂಧ್ರದಲ್ಲಿ ಕೋವಿಡ್ ಕೇಸ್ ಇರುವುದರಿಂದ ಕರ್ನಾಟಕದ ಜನರಿಗೆ ಆರೋಗ್ಯ ಸಚಿವರು ಮಹತ್ವದ ಸಂದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಡೇಂಜರ್ ಇಲ್ಲ, ಆದರೆ ಎಚ್ಚರಿಕೆ ವಹಿಸಿ ಎಂದು ಸಚಿವ ಯು.ಟಿ ಖಾದರ್ ಸಲಹೆ ನೀಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಕೋವಿಡ್‌ಗೆ ನಾಲ್ಕು ಜನ ಉಸಿರು ಚೆಲ್ಲಿದ್ದಾರೆ. ಕೋವಿಡ್ ಸೋಕಿಂತರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಪಾವಗಡ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದರೆ ರಾಜ್ಯದಲ್ಲೂ ಕೂಡ ಕೋವಿಡ್ ಇದೆಯಾ ಎಂಬ ಆತಂಕ ಶುರುವಾಗಿದೆ. ಆದರೆ ಆರೋಗ್ಯ ಸಚಿವ ಯು.ಟಿ ಖಾದರ್ ಕೋವಿಡ್ ಆತಂಕ ಬೇಡ ಎಂದು ರಾಜ್ಯದ ಜನರಿಗೆ ಹೇಳಿದ್ದಾರೆ.

ಕೊರೋನಾ ರಾಜ್ಯದಲ್ಲಿ ಏರಿಕೆ ಇಲ್ಲ. ಆ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಆದರೆ ಜನ ಎಚ್ಚರಿಕೆ ವಹಿಸಬೇಕು. ಸಾಂಕ್ರಾಮಿಕ ರೀತಿ ಆಗಿದೆ. ಆದರೆ ಕೋವಿಡ್ ಬಗ್ಗೆ ಆತಂಕ ಬೇಡ ಎಂದಿದ್ದಾರೆ. ಸದ್ಯಕ್ಕೆ ಆ ರೀತಿ ಆತಂಕ ಇಲ್ಲ, ಮುಂದೆ ಕೋವಿಡ್ ಹರಡುವ ಸಾಧ್ಯತೆ ಇದೆ ಎಂದಿದ್ದಾರೆ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !