September 24, 2026
Thursday, September 24, 2026
spot_img

ಹಬ್ಬದ ದಿನವೂ ಮಾಡರ್ನ್ ಡ್ರೆಸ್ ಬೇಕಿತ್ತಾ? ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ನಟಿ ಕೃತಿ ಸನೋನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ಬಾಲಿವುಡ್ ನಟಿ ಕೃತಿ ಸನೋನ್ ಅವರು ನಟಿಸಿರುವ ಪ್ರಸಿದ್ಧ ಆಭರಣ ಬ್ರಾಂಡ್‌ನ ರಕ್ಷಾ ಬಂಧನ ಹಬ್ಬದ ಹೊಸ ಜಾಹೀರಾತು ಲುಕ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಜಾಹೀರಾತುವಿನಲ್ಲಿ ನಟಿ ಧರಿಸಿರುವ ಮಾಡರ್ನ್ ಡ್ರೆಸ್ ಮತ್ತು ಹಬ್ಬವನ್ನು ಬಿಂಬಿಸಿರುವ ವಿಧಾನದ ಕುರಿತು ನೆಟ್ಟಿಗರು ತಮ್ಮದೇ ಆದ ಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಪರ-ವಿರೋಧದ ಚರ್ಚೆ ತೀವ್ರಗೊಂಡಿದೆ.

ಹಬ್ಬದ ದಿನವೂ ಮಾಡರ್ನ್ ಡ್ರೆಸ್ ಬೇಕಿತ್ತಾ?

ಈ ಹೊಸ ಜಾಹೀರಾತು ಪ್ರಚಾರದಲ್ಲಿ ಕೃತಿ ಸನೋನ್ ಅವರು ಆಫ್-ವೈಟ್ ಬ್ರ್ಯಾಲೆಟ್ ಮಾದರಿಯ ಬ್ಲೌಸ್, ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಹಬ್ಬದ ವಾತಾವರಣಕ್ಕೆ ಈ ಉಡುಪು ತೀರಾ ಅಸಭ್ಯವಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, ಅಣ್ಣನಿಗೆ ರಾಖಿ ಕಟ್ಟುವಾಗ ಇಂತಹ ಉಡುಪು ಧರಿಸಬೇಕಿತ್ತಾ? ಪೂಜೆಯ ತಟ್ಟೆ ಎಲ್ಲಿದೆ? ತಿಲಕ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಸಾಕುನಾಯಿಗೆ ರಾಖಿ: ಮತ್ತೊಂದು ವಿವಾದ

ಈ ಜಾಹೀರಾತಿನಲ್ಲಿ ಕೃತಿ ಸನೋನ್ ಅವರು ತಮ್ಮ ಸಹೋದರನ ಜತೆಗೆ ತಮ್ಮ ಸಾಕುನಾಯಿಗೂ ರಾಖಿ ಕಟ್ಟುವ ದೃಶ್ಯವಿದೆ. ನಾಯಿ ಬೊಗಳಿದಾಗ, ಅದನ್ನು ಕುಟುಂಬದ ಭಾಗವಾಗಿ ಭಾವಿಸಿ ಕೃತಿ ರಾಖಿ ಕಟ್ಟುತ್ತಾರೆ. ಆದರೆ ಇದು ಭಾರತೀಯ ಹಬ್ಬಗಳ ಪವಿತ್ರತೆಯನ್ನು ಹಾಳು ಮಾಡುವ ಪ್ರಯತ್ನ ಎಂದು ಹಲವರು ಟೀಕಿಸಿದ್ದಾರೆ. ಈ ಜಾಹೀರಾತಿನಲ್ಲಿ ಅಣ್ಣನಿಗಿಂತ ಸಾಕುನಾಯಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ರಕ್ಷಾ ಬಂಧನದ ನಿಜವಾದ ಅರ್ಥ ಮತ್ತು ಗೌರವವನ್ನು ಹಾಳುಮಾಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಮೌನ ವಹಿಸಿದ ನಟಿ:

ಸಾಮಾಜಿಕ ಜಾಲತಾಣಗಳಲ್ಲಿ ಈ ಜಾಹೀರಾತು ಮತ್ತು ಬ್ರಾಂಡ್ ವಿರುದ್ಧ ವ್ಯಾಪಕ ಬಾಯ್ಕಾಟ್ ಸದ್ದು ಕೇಳಿಬರುತ್ತಿದ್ದರೂ, ನಟಿ ಕೃತಿ ಸನೋನ್ ಆಗಲಿ ಅಥವಾ ಸಂಬಂಧಪಟ್ಟ ಆಭರಣ ಸಂಸ್ಥೆಯಾಗಲಿ ಇನ್ನು ಈ ವಿವಾದದ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇಂಟರ್ನೆಟ್‌ನಲ್ಲಿ ಈ ವಿಡಿಯೋಗೆ ಸದ್ಯ ಮಿಶ್ರ ಪ್ರತಿಕ್ರಿಯೆಗಳು ಹರಿದುಬರುತ್ತಲೇ ಇವೆ.

ಇದನ್ನೂ ಓದಿ:

ಸಿನಿ ರಂಗದಲ್ಲಿ ಕೃತಿ ಸನೋನ್

ಚಿತ್ರರಂಗದ ವಿಷಯಕ್ಕೆ ಬರುವುದಾದರೆ, ಕೃತಿ ಸನೋನ್ ಇತ್ತೀಚೆಗೆ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿದ್ದ ರೋಮ್ಯಾಂಟಿಕ್ ಕಾಮಿಡಿ-ಡ್ರಾಮಾ ಸಿನಿಮಾ ‘ಕಾಕ್ಟೇಲ್ 2’ ನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ 2025 ರಲ್ಲಿ ಧನುಷ್ ಅವರೊಂದಿಗೆ ‘ತೇರೆ ಇಷ್ಕ್ ಮೇನ್’ ಚಿತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ, ಕೃತಿ ಅವರು ಥ್ರಿಲ್ಲರ್ ಕಥಾಹಂದರ ಹೊಂದಿದ್ದ ‘ದೋ ಪತ್ತಿ’ ಚಿತ್ರದ ಮೂಲಕ ಚಿತ್ರ ನಿರ್ಮಾಪಕಿಯಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !