VIRAL VIDEO| ಈ ಶ್ವಾನ ಸಾಮಾನ್ಯದ್ದಲ್ಲ, ಕೊಡುವ ಪೋಸು ಕಮ್ಮಿಯಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿಗೆ ಕನ್ನಡಿ ಸಿಕ್ಕರೆ ಸಾಕು ಮನುಷ್ಯರಿಗಿಂತ ಪ್ರಾಣಿಗಳೇ ನೋಡಿಕೊಳ್ಳುವುದು ಜಾಸ್ತಿ, ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮೊನ್ನೆಯಷ್ಟೇ ಕುದುರಯ ವಿಡಿಯೋವೊಂದು ವೈರಲ್‌ ಆಗಿತ್ತು. ಇದೀಗ ಮುದ್ದು ಮುದ್ದು ನಾಯಿಯೊಂದು ಕನ್ನಡಿ ಮುಂದೆ ಕುಳಿತು ವಿವಿಧ ರೀತಿಯ ಪೋಸ್‌ ಕೊಟ್ಟಿರುವ ದೃಶ್ಯ ಸದ್ಯ ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ನೆಲದ ಮೇಲೆ ಇಟ್ಟ ಕನ್ನಡಿ ಮುಂದೆ ಕುಳಿತಿರುವ ಶ್ವಾನ ತನ್ನ ಕಾಲನ್ನು ಅತ್ತಿಂದಿತ್ತ, ಇತ್ತಿಂದತ್ತ ಮಾಡುವ ದೃಶ್ಯ, ಒಮ್ಮೆ ಪರ್ಸ್‌ ಹಿಡಿದು ನೋಡುತ್ತಿರುವ ದೃಶ್‌ ನೋಡುಗರ ಮನ ಗೆದ್ದಿದೆ.

ಈ ಕ್ಲಿಪ್ ಸುಮಾರು 22.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಎಲ್ಲರೂ ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಾಯಿಗೆ ಇರುವಷ್ಟು ಬುದ್ಧಿ ಮನುಷ್ಯರಿಗೆ ಇಲ್ಲ ಎನ್ನುವ ಕಮೆಂಟ್‌ಗಳೇ ಹೆಚ್ಚಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!