ವಿಮೋಚನಾ ದಿನ: ಇದು ಅಚಲ ದೇಶಪ್ರೇಮಕ್ಕೆ ಸಾಕ್ಷಿ ಎಂದು ಜನರಿಗೆ ಶುಭ ಕೋರಿದ ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೈದರಾಬಾದ್​ಗಿಂದು ವಿಮೋಚನಾ ದಿನ. ಈ ದಿನದ ಪ್ರಯುಕ್ತ ತೆಲಂಗಾಣ ರಾಜಧಾನಿ ಹೈದರಾಬಾದ್​ನ ಪರೇಡ್ ಗ್ರೌಂಡ್‌ನಲ್ಲಿ ‘ಮುಕ್ತಿ ದಿವಸ್’ ಎಂಬ ಹೆಸರಿನಲ್ಲಿ ವಿಮೋಚನಾ ದಿನಾಚರಣೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿ, ಇದು ಅಚಲ ದೇಶಪ್ರೇಮಕ್ಕೆ ಸಾಕ್ಷಿ ಎಂದು ಜನರಿಗೆ ಶುಭ ಕೋರಿದರು.

ಈ ಕುರಿತು ಟ್ವೀಟ್‌ ಮಾಡಿರುವ ಅವರು “ಹೈದರಾಬಾದ್‌ನ ಎಲ್ಲಾ ಜನರಿಗೆ ಹೈದರಾಬಾದ್ ವಿಮೋಚನಾ ದಿನದ ಶುಭಾಶಯಗಳು. ಈ ದಿನ ರಾಜ್ಯ ಜನರ ಅಚಲ ದೇಶಪ್ರೇಮ ಮತ್ತು ನಿಜಾಮನ ದುಷ್ಟ ಆಡಳಿತ, ದಬ್ಬಾಳಿಕೆಯಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಜನರ ನಿರಂತರ ಹೋರಾಟಕ್ಕೆ ಸಾಕ್ಷಿಯಾಗಿದೆ. ಹೋರಾಟದಲ್ಲಿ ಮಡಿದ ಎಲ್ಲಾ ವೀರರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ” ಎಂದು ಹೇಳಿದ್ದಾರೆ.

ಹೈದರಾಬಾದ್​ ನಿಜಾಮ ಸಂಸ್ಥಾನದ ಅರಸ ಭಾರತದ ಒಕ್ಕೂಟ ಸೇರಲು ಸಮ್ಮತಿಸದಿದ್ದಾಗ ಮತ್ತೊಂದು ಮಹಾ ಚಳುವಳಿಯೇ ನಡೆಸಬೇಕಾಯಿತು. ಸುಮಾರು ಹದಿಮೂರು ತಿಂಗಳುಗಳ ಬಳಿಕ ಅಂದರೆ, 1948 ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ಬಂದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!