ನಾಯಿ ನಿಯತ್ತಿನ ಪ್ರಾಣಿ, ಜನರಿಗಾಗಿ ನಿಯತ್ತಾಗಿ ಕೆಲಸ ಮಾಡುತ್ತಿರುವೆ: ಸಿದ್ದರಾಮಯ್ಯ ಗೆ ಸಿಎಂ ಬೊಮ್ಮಾಯಿ ತಿರುಗೇಟು

ಹೊಸ ದಿಗಂತ ವರದಿ,ಬಳ್ಳಾರಿ:

ನಾಯಿ ನಿಯತ್ತಿನ ಪ್ರಾಣಿ, ಜನರಿಗಾಗಿ ನಿಯತ್ತಾಗಿ ಕೆಲಸ ಮಾಡುತ್ತಿರುವೆ, ಅದೇ ನಿಯತ್ತನ್ನು ಜನರ ಪರವಾಗಿ ಉಳಿಸಿಕೊಂಡು ಹೋಗುವೆ, ಸಿದ್ದರಾಮಯ್ಯ ತರಹ ಸಮಾಜ ಒಡೆಯುವ ಕೆಲಸ ಮಾಡೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ಮೋದಿ ಎದುರು ಸಿ.ಎಂ.ನಾಯಿ ಮರಿ‌ ತರಹ ಇರ್ತಾರೆ ಅನ್ನೋ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ನಗರದಲ್ಲಿ ಬುಧವಾರ ಪ್ರತಿಕ್ರೀಯಿಸಿದ ಅವರು, ಸಿದ್ದರಾಮಯ್ಯ ತರಹ ಸೌಭಾಗ್ಯ ಕೊಡ್ತೇವೆ, ಎಂದು ದೌರ್ಭಾಗ್ಯ ನಾವು ಕೊಟ್ಟಿಲ್ಲ, ಸಿದ್ದರಾಮಯ್ಯ ಸುಳ್ಳು ಹೇಳುವದರಲ್ಲಿ ನಿಶ್ಚೀಮರು, ಅವರಂತೆ ಸುಳ್ಳು ಹೇಳುವ ಸ್ವಭಾವ ನನ್ನದಲ್ಲ, ಅವರ ತರಹ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ ಎಂದರು. ಚೆರ್ಚೆಗೆ ಆಹ್ವಾನ ನೀಡುತ್ತಿರುವ ಸಿದ್ದರಾಮಯ್ಯ ಅವರಿಗೆ ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದಿದೆ. ಜನರ ದಾರಿ ತಪ್ಪಿಸುವ ಹೇಳಿಕೆ ಇದಾಗಿದೆ. ಬೆಳಗಾವಿಯಲ್ಲಿ ಕಳೆದ 15 ದಿನ ಸದನ ನಡೆಯಿತು. ಅಲ್ಲಿ ಚೆರ್ಚಿಸಿದ್ದರೇ ಎಲ್ಲದಕ್ಕೂ ಸಮರ್ಥವಾಗಿ ಉತ್ತರ ಕೊಡಲು ಸರ್ಕಾರ ಸಿದ್ದವಿದೆ. ಎಲ್ಲಿ ವೇದಿಕೆ ಇರುತ್ತೋ ಅಲ್ಲೇ ಚೆರ್ಚೆ ಮಾಡೋಲ್ಲ ಎಂದರು.
ಸಿದ್ದರಾಮಯ್ಯ ಸಿ.ಎಂ.ಆಗಿದ್ದಾಗ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಆವಾಗ ಸಿದ್ದರಾಮಯ್ಯ ರಾಜ್ಯಕ್ಕೆ ನಯಾಪೈಸೆ ತರಲಿಲ್ಲ, ರಾಜ್ಯಕ್ಕೆ ಅವರಿಂದ ಕೊಡುಗೆ ಏನೂ ಇಲ್ಲ. ಮೋದಿಜೀ ಅವರು ರಾಜ್ಯಕ್ಕೆ 7 ಸಾವಿರ ಕಿ.ಮೀ.ಹೆದ್ದಾರಿ ಕೊಡುಗೆ ನೀಡಿದ್ದಾರೆ, ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ, ಮಂಗಳೂರು-ಕಾರವಾರ ಫೋರ್ಟ್ ನೀಡಿದ್ದು, ಮೋದಿಜೀ ಎನ್ನುವುದನ್ನು ನೆನಪಿಸಿಕೊಳ್ಳಬೇಕು, ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮೋದನೆ ನೀಡಿದ್ದಾರೆ, ಅಪ್ಪರ್ ಭದ್ರಾ ಯೋಜನೆ, ಎಲ್ಲ ಜಿಲ್ಲೆಗಳಿಗೂ ಸ್ಮಾರ್ಟ್ ಸಿಟಿ ಕೊಟ್ಟಿದ್ದು, ಮೋದಿಜೀ, ಅವರೋಬ್ಬ ಕಾಮಧೇನು ಇದ್ದಂತೆ, ಸಿದ್ದರಾಮಯ್ಯ ಗೆ ಇದರ ಬಗ್ಗೆ ಜ್ಞಾನ ವಿಲ್ಲ, ನಾನಾ ಸುಳ್ಳು ಹೇಳಿಕೆಗಳನ್ನು ನೀಡುವಲ್ಲಿ ನಿಶ್ಚೀಮರು ಅವರು, ರಾಜ್ಯದ ಜನರೇ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!