ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಕು ಪ್ರಾಣಿಗಳಿಗೂ ಮನೆ ಮಂದಿಗೂ ಅದೇನೋ ಅವಿನಾಭಾವ ಸಂಬಂಧ. ಇಲ್ಲೊಂದು ಶ್ವಾನ ತನ್ನ ಮನೆಗೆ ಸುಮಾರು 9 ತಿಂಗಳ ಬಳಿಕ ಬಂದ ಅಜ್ಜಿಯನ್ನು ಪ್ರೀತಿಯಿಂದ ಸ್ವಾಗತಿಸಿದೆ.
ಈ ವಿಡಿಯೋ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದ್ದು, ಅಜ್ಜಿ ಹಾಗೂ ಶ್ವಾನದ ನಡುವಿನ ಪ್ರೀತಿಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಫಿದಾ ಆಗಿದ್ದಾರೆ.
ಏನಿದೆ ವಿಡಿಯೋದಲ್ಲಿ?
ಅಜ್ಜಿ ಮನೆಗೆ ಬಂದಿದ್ದನ್ನು ಕಂಡ ಶ್ವಾನ ತಾನಿದ್ದ ಜಾಗದಿಂದ ಓಡಿ ಬಂದು ಅಜ್ಜಿಯ ಮೇಲೆರಗಿ ಖುಷಿ ಪಟ್ಟಿದೆ. ಅಜ್ಜಿಯೂ ಕೈಗಳನ್ನು ಸ್ಯಾನಿಟೈಸ್ ಮಾಡಿ ಶ್ವಾನವನ್ನು ಮುದ್ದಾಡಿದ್ದಾರೆ.