Friday, June 2, 2023

Latest Posts

ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿ ಸಂತಸ ಪಟ್ಟ ನಟ ಡಾಲಿ ಧನಂಜಯ

ಹೊಸದಿಗಂತ ವರದಿ, ಹುಬ್ಬಳ್ಳಿ:

ಚಲನಚಿತ್ರ ನಟ ಡಾಲಿ ಖ್ಯಾತಿ ಧನಂಜಯ ಅವರು ಸೋಮವಾರ ನಗರದ ಸುಧು ಚಿತ್ರಮಂದಿರಕ್ಕೆ ಭೇಟಿ ನೀಡಿ ಇತ್ತೀಚೆಗೆ ಬಿಡುಗಡೆಯಾದ ಅವರ ಬಡವಾ ರಾಸ್ಕಲ್ ಸಿನಿಮಾವನ್ನು ಅಭಿಮಾನಿಗಳೊಂದಿಗೆ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಡಾಲಿ ಧನಂಜ್ಯಯ ಅವರು ಬರುವ ವಿಷಯ ತಿಳಿದ ನೂರಾರು ಅಭಿಮಾನಿಗಳು ಚಿತ್ರಮಂದಿರ ಎದುರಿಗೆ ಸೇರಿದ್ದರು. ಬಂದ ನಂತರ ವಾದ್ಯಮೇಳದ ಮತ್ತು ಉತ್ತರ ಕರ್ನಾಟಕದ ಜನಪದ ಕಲಾವಿದರಿಂದ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ಅಭಿಮಾನಿಗಳು ಶಾಲು ಮತ್ತು ರೂಮಾಲ ಹಾಕಿ ಸನ್ಮಾನಿಸಿದರು.
ನಂತರ ಚಿತ್ರಮಂದಿರ ಪ್ರವೇಶ ಮಾಡಿದ ಅವರು ಕೆಲ ಹೊತ್ತು ಸಿನಿಮಾ ನೋಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಬಡವ್ ರಾಸ್ಕಲ್ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಅಭಿಮಾನಿಗಳು ನಿಜವಾಗಲೂ ದೇವರ ಸಮಾನ ಅವರಿಂದ ನಾವು ಇರೋದ ನಿಜವಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನ ಚಿತ್ರಮಂದಿರಕ್ಕೆ ಬಂದು ನೋಡುತ್ತಿರುವುದು ಖುಷಿಯ ವಿಚಾರ. ಬಡವ್ ರಾಸ್ಕಲ್ ಎಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಎಂದು ಸೇರಿದ್ದ ಅಭಿಮಾನಿಗಳ ಧನ್ಯವಾದ ತಿಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಅಭಿಮಾನಿ ಗಳು ಅವರೊಂದಿಗೆ ಸೆಲಿ ತೆಗೆಸಿಕೊಳ್ಳು ಮುಗಿಬಿದ್ದರು.
ಈ ಸಂದರ್ಭದಲ್ಲಿ ಶಿವಾನಂದ ಮುತ್ತಣ್ಣವರ, ಅಯ್ಯಪ್ಪ ಶಿರಕೋಳ, ಚಿತ್ರಮಂದಿರದ ಮ್ಯಾನೇಜರ ಮಂಜುನಾಥ ನೂಲ್ವಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!