Sunday, June 4, 2023

Latest Posts

ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳ ಸಹಾಯಕ್ಕೆ ಸರ್ಕಾರ ಸದಾ ಸಿದ್ದ: ಕೃಷಿ ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಹಾವೇರಿ:

ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಅಲ್ಪವಾದರೂ ಸಹಾಯವಾಗಲೆಂಬ ಉದ್ದೇಶದಿಂದ ಎಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಲಾ ೫೦ ಸಾವಿರ ರೂಗಳು ಸೇರಿ ಒಟ್ಟು ಒಂದು ಲಕ್ಷ ರೂಗಳ ಸಹಾಯ ಮಾಡಲಾಗುತ್ತಿದೆ. ಈ ಕುಟುಂಬಗಳ ಸಹಾಯಕ್ಕೆ ಸರ್ಕಾರ ಸದಾ ಸಿದ್ದವಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ನಗರದ ತಾ.ಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೊರೋನಾದಿಂದ ಮೃತ ಕುಟುಂಬಗಳೀಗೆ ಚಕ್ ವಿತರಿಸಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್‌ದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಲಾ ೫೦ ಸಾವಿರ ಸೇರಿ ಒಂದು ಲಕ್ಷ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ೫೦ ಸಾವಿರ ರೂಗಳ ನೀಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದೆ ೪೦೭ ಹಾಗೂ ಎಪಿಎಲ್ ಕಾರ್ಡ್ ಹೊಂದಿದ ೫೯೪ ಜನ ಮೃತ ಪಟ್ಟಿದ್ದಾರೆ. ಈ ಹಣ ನೀಡುವುದರಿಂದ ಅಕಾಲಿಕ ಮರಣ ಹೊಂದಿದ ಕುಟುಂಬಗಳ ಎಲ್ಲ ನೂವುಗಳು ದೂರವಾಗುತ್ತವೆ ಎನ್ನಲಾಗದು ಆದರೂ ಸಂಕಷ್ಟದಲ್ಲಿರುವ ಕುಟುಂಬಗಳೀಗೆ ಅಲ್ಪವಾದರೂ ಸಹಾಯವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಈ ಸಹಾಯಧನವನ್ನು ನೀಡುವುದಕ್ಕೆ ಮುಂದಾಗಿದೆ ಎಂದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಕೊರೋನಾದಿಂದ ಮೃತ ಪಟ್ಟ ಕುಟುಂಬಗಳಿಗೆ ಕೇವಲ ಮಾತನಿಂದ ಮಣ್ಣೀರೊರೆಸುವ ಕೆಲಸವನ್ನು ಮಾಡದೇ ನೊಂದಿದ್ದ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವದಕ್ಕೆ ಮುಂದಾಗಿದೆ. ಆದರೆ, ಕಾಂಗ್ರೆಸ್ ಸಾವಿನ ಮನೆಗಳಿಗೆ ತೆರಳಿ ಇಂತಹ ನೂವಿನ ಸಂದರ್ಭದಲ್ಲಿಯೂ ಸಹ ಜನತೆಗೆ ಆರ್ಥಿಕ ಸಹಾಯದ ಚಕ್‌ಗಳನ್ನು ನೀಡುವದಾಗಿ ಸುಳ್ಳನ್ನು ಹೇಳುವ ಮೂಲಕ ಜನತೆಗೆ ಮೋಸ ಮಾಡುವ ಕೆಲಸವನ್ನು ಮಾಡಿತು ಎಂದರು.
ಕೊರೋನಾ ಮೂರನೆ ಅಲೆ ಯಾವ ರೀತಿ ಅಪಾಯವನ್ನು ತರುತ್ತದೆ ಎಂದು ಇನ್ನು ಯಾರಿಗೂ ತಿಳಿದಿಲ್ಲ ಹೀಗಾಗಿ ಅಧಿಕ ಪ್ರಮಾಣದಲ್ಲಿ ಜನ ಸೇರುವ ಜಾತ್ರೆ, ಸಭೆ ಸಮಾರಂಭಗಳಿಗೆ ಮಕ್ಕಳನ್ನು ಕಳಿಬೇಡಿರಿ ಎಂದು ಪಾಲಕರಿಗೆ ಕರೆ ನೀಡಿದರಲ್ಲದೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸದೇ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಹಾಗೂ ಕೊರೋನಾ ಟೆಸ್ಟ್ ಮಾಡಿಸಿರಿ ಎಂದು ತಿಳಿಸಿದರು.
ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕೆಲ ಕುಟುಂಬಗಳಲ್ಲಿ ತಂದೆ ಹಾಗೂ ತಾಯಿ ಮೃತಪಟ್ಟ ಉದಾಹರಣೆಗಳೂ ಇವೆ. ಇಂತಹ ಕುಟುಂಬದ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳುವ ಮೂಲಕ ಇಂಹತ ಕುಟುಂಬಗಳಿಗೆ ನೆರವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ಲಸಿಕೆ ಪಡೆಯುವಂತೆ ಜನತೆಗೆ ಕರೆ ನೀಡಿದ್ದ ಆರಂಭದ ಸಂದರ್ಭದಲ್ಲಿ ಲಸಿಕೆ ಕುರಿತು ಹಗುರವಾಗಿ ಮಾತನಾಡಿದವರೇ ಕೊರೋನಾದ ಅಪಾಯವನ್ನು ಅರಿವಾದಾಗ ಟೀಕಿಸಿದವರೇ ಸರತಿ ಸಾಲಿನಲ್ಲಿ ಮೊದಲು ನಿಂತುಕೊಂಡು ಲಸಿಕೆಯನ್ನು ಪಡೆದುಕೊಂಡ ನಿದರ್ಶನಗಳಿಗೆ ಹೀಗಾಗಿ ಸರ್ಕಾರ ನೀಡುತ್ತಿರುವ ಲಸಿಕೆಗಳು ಉತ್ತಮವಾಗಿರುವ ಕಾರಣ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಂಡು ಇದರಿಂದ ರಕ್ಷಣೆಯನ್ನು ಪಡೆದುಕೊಳ್ಳುವಂತೆ ಹೇಳಿದರು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಶ್ವಾಮಿ, ಎಸಿ ಶಿವಾನಂದ ಉಳ್ಳಾಗಡ್ಡಿ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!