ವಿಂಡೀಸ್‌ನ ಈ ಯಂಗ್‌ ಡೈನಾಮಿಕ್ ಪ್ಲೆಯರ್‌ ಐಪಿಎಲ್‌ ಹೊಸ‌ ಲಕ್ಕಿ ಚಾರ್ಮ್; 2 ವರ್ಷ, 2 ಟ್ರೋಫಿ!

ಹೊಸದಿಗಂತ ಡಜಿಟಲ್‌ ಡೆಸ್ಕ್‌
ಐಪಿಎಲ್‌ ನಲ್ಲಿ ಹತ್ತಾರು ವರ್ಷ ಆಡಿ ನೂರಾರು ದಾಖಲೆ ಬರೆದ ಹಲವಾರು ಖ್ಯಾತನಾಮರಿಗೆ ಐಪಿಎಲ್‌ ಕಪ್ ಇಂದಿಗೂ‌ ಮರೀಚಿಕೆ. ಕೊಹ್ಲಿ, ಕೆ.ಎಲ್.ರಾಹುಲ್‌, ಎಬಿಡಿಯಂತಹ ದಿಗ್ಗಜ ಆಟಗಾರರಿಗೂ ಒಮ್ಮೆಯೂ ಕಪ್‌ ಎತ್ತ ಹಿಡಿಯುವಂತಹ ಅವಕಾಶವೇ ಸಿಕ್ಕಿಲ್ಲ. ಅಂತಹದ್ದರಲ್ಲಿ ಕಳೆದ ಎರಡು ಆವೃತ್ತಿಗಳಿಂದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಯಂಗ್‌ ವೆಸ್ಟ್‌ಇಂಡೀಸ್ ಆಟಗಾರನೊಬ್ಬ ಸತತ ಎರಡು ವರ್ಷ ಎರಡು ತಂಡಗಳಲ್ಲಿ ಐಪಿಎಲ್‌ ಟ್ರೋಫಿ ಗೆದ್ದುಕೊಂಡಿದ್ದಾನೆ.
ವೆಸ್ಟ್‌ ಇಂಡೀಸದ್‌ ಆಟಗಾರ ಡೊಮಿನಿಕ್ ಡ್ರೇಕ್ಸ್ ಸದ್ಯ ಐಪಿಎಲ್‌ ನ ಹೊಸ ಲಕ್ಕಿ ಚಾರ್ಮ್‌ ಎಂದು ಕರೆಸಿಕೊಳ್ಳುತ್ತಿದ್ದಾರೆ. ವೆಸ್ಟ್‌ಇಂಡೀಸ್‌ ದೇಶೀಯ ಟೂರ್ನಿ ಹಾಗೂ ಸಿಪಿಎಲ್‌ ನಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಡ್ರೇಕ್ಸ್ ಮೇಲೆ ಹಲವು ಐಪಿಎಲ್‌ ಪ್ರಾಂಚೈಸಿಗಳು ಕಣ್ಣಿಟ್ಟಿದ್ದವು. 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ಸ್ಯಾಮ್ ಕರ್ರನ್ ಗಾಯಗೊಂಡು ಹೊರಬಿದ್ದಾಗ ಸಿಎಸ್‍ಕೆ  ಡೊಮಿನಿಕ್ ಡ್ರೇಕ್ಸ್‌ ರನ್ನು ಬದಲಿ ಆಟಗಾರನಾಗಿ ಕರೆತಂದಿತ್ತು. ಆದರೆ ಡ್ರೇಕ್ಸ್ ಗೆ ಚೆನ್ನೈ ಪರ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಿಎಸ್‍ಕೆ 2021ರಲ್ಲಿ ಐಪಿಎಲ್‍ನಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ವೇಳೆ ಡ್ರೇಕ್ಸ್ ಚಾಂಪಿಯನ್‌ ತಂಡದ ಭಾಗವಾಗಿದ್ದರು.
15ನೇ ಆವೃತ್ತಿ ಐಪಿಎಲ್‍ನಲ್ಲಿ ಗುಜರಾತ್ ಟೈಟಾನ್ಸ್‌ ಡೊಮಿನಿಕ್ ಡ್ರೇಕ್ಸ್ ರನ್ನು ಖರೀದಿಸಿತ್ತು. ಈ ಬಾರಿಯೂ ಡ್ರೇಕ್ಸ್‌ಗೆ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ಇದೀಗ ಟೈಟಾನ್ಸ್ ಸಹ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದು ಡ್ರೇಕ್‌ ಗೆ ಅದೃಷ್ಟಶಾಲಿ ಎಂಬ ಪಟ್ಟವನ್ನು ಹೊತ್ತು ತಂದಿದೆ!.


ಸದ್ಯ ಕೆಲ ಫ್ಯಾನ್ಸ್‌ ಗಳು, ಡ್ರೇಕ್ಸ್‌ ರನ್ನು ಮುಂದಿನ ಬಾರಿ ಆರ್ಸಿಬಿ ಕೊಂಡುಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದು, ಆ ಮೂಲಕವಾದರೂ ತಂಡಕ್ಕೆ ಅದೃಷ್ಠದ ಬಲ ಸಿಗಲಿ ಎಂದು ಆಶಿಸುತ್ತಿದ್ದಾರೆ. ಹಿಂದೆ ವಿವಿಧ ಐಪಿಎಲ್‌ ತಂಡಗಳಲ್ಲಿದ್ದ ವೇಳೆ ಸತತವಾಗಿ ಕಪ್‌ ಗೆದ್ದು ಲಕ್ಕಿ ಚಾರ್ಮ್‌ ಎಂದು ಕರೆಸಿಕೊಳ್ಳುತ್ತಿದ್ದ ಸ್ಪಿನ್ನರ್‌ ಕರಣ್‌ ಶರ್ಮಾ ಈ ಬಾರಿ ಆರ್ಸಿಬಿ ತಂಡದಲ್ಲಿದ್ದರೂ ಫ್ಯಾನ್ಸ್‌ ಗಳ ನಂಬಿಕೆ ಹುಸಿಯಾಗಿ ಆರ್ಸಿಬಿ ಕಪ್‌ ಗೆಲ್ಲುವಲ್ಲಿ ವಿಫಲತೆ ಕಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!