ಮಾಜಿ ವಿಶ್ವ ಸುಂದರಿಗೆ ರಾಮ್‌ಚರಣ್‌ ಜೊತೆ ಡೇಟಿಂಗ್‌ ಹೋಗೋ ಆಸೆಯಂತೆ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ನಾಯಕನಾಗಿ ಮತ್ತು ಮಾನುಷಿ ನಾಯಕಿಯಾಗಿ ನಟಿಸಿರುವ ಪೃಥ್ವಿರಾಜ್ ಜೂನ್ 3 ರಂದು ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಮಾನುಷಿ ಚಿಲ್ಲರ್ ಹಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ನಾನು RRR ಸಿನಿಮಾ ನೋಡಿದ ನಂತರ ಚರಣ್ ಅವರ ಅಭಿಮಾನಿಯಾದೆ. ಚರಣ್ ಜೊತೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ ಆಕೆ, ರಾಮ್ ಚರಣ್‌ಗೆ ಮದುವೆಯಾಗಿಲ್ಲ ಅಂದಿದ್ರೆ ಚರಣ್ ನನ್ನು ಖುದ್ದಾಗಿ ಡೇಟಿಂಗ್‌ ಹೋಗೋಣವೆಂದು ಕರೆಯತ್ತಿದ್ದೆ ಎಂದಿದ್ದಾರೆ. ರಾಮ್ ಚರಣ್ ನನ್ನೊಂದಿಗೆ ಡೇಟ್ ಮಾಡಲು ಒಪ್ಪಿಕೊಂಡರೆ ನಾವು ಒಟ್ಟಿಗೆ ಸಿನಿಮಾ ನೋಡಿ, ಇಷ್ಟವಾದ ಆಹಾರ ಸವೆದು ಸಮಯ ಕಳೆಯುತ್ತಿದ್ದೆವು ಎಂದು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ಡೇಟಿಂಗ್‌ ಹೋಗೋದು ಕಷ್ಟ ಆದ್ರೆ ಗಟ್ಟಿಯಾಗಿ ಟ್ರೈ ಮಾಡಿದ್ರೆ ಅವರ ಜೊತೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುವ ಸಾಧ್ಯತೆ ಇದೆ ಅಂತಿದಾರೆ ಅಭಿಮಾನಿಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!