ಟ್ವಿಟರ್‌ ಗೆ ಸೆಡ್ಡು ಹೊಡೆದು ಹೊಸ ಆಪ್‌ ಶುರು ಮಾಡಿದ ಡೊನಾಲ್ಡ್‌ ಟ್ರಂಪ್!‌ ನಾಳೆ ಲಾಂಚ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫೇಸ್‌ ಬುಕ್‌, ಟ್ವಿಟರ್‌ ನಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಬಂದು ವರ್ಷವೇ ಕಳೆದು ಹೋಗಿದೆ. ಅದನ್ನೇ ಸವಾಲಾಗಿ ತೆಗೆದುಕೊಂಡ ಅವರು ತಮ್ಮದೇ ಆದ ಹೊಸ ಸೋಷಿಯಲ್‌ ಮಿಡಿಯಾ ಆಪ್‌ ಲಾಂಚ್‌ ಶುರು ಮಾಡಿದ್ದಾರೆ.
ಫೆ.21 2022ರಂದು ಡೊನಾಲ್ಡ್‌ ಟ್ರಂಪ್‌ ತಮ್ಮ ʼಟ್ರುತ್‌ ಸೋಷಿಯಲ್‌ʼ ಎಂಬ ಆಪ್‌ ಅನ್ನು ಅಧಿಕೃತವಾಗಿ ಲಾಂಚ್‌ ಮಾಡುವ ಸಾಧ್ಯತೆ ಇದೆ. ಟ್ರುತ್ ಸೋಷಿಯಲ್‌ ನಲ್ಲಿ ಡೊನಾಲ್ಡ್‌ ಟ್ರಂಪ್‌ ಮೊದಲ ಪೋಸ್ಟ್‌ ಮಾಡಿದ್ದು, ʼನಿಮ್ಮ ನೆಚ್ಚಿನ ಅಧ್ಯಕ್ಷ ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ. ತಯಾರಾಗಿರಿʼ ಎಂದಿದ್ದಾರೆ.
ಈ ಹೊಸ ಆಪ್‌ ನಲ್ಲಿ ಪಬ್ಲಿಷ್‌ ಮಾಡುವ ಪೋಸ್ಟ್‌ ಗಳನ್ನು ʼಟ್ರುತ್‌ʼ ಎಂದು ಕರೆಯಲಾಗುತ್ತದೆ. ಇದರಲ್ಲಿ ರಿಪ್ಲೈ, ಲೈಕ್‌, ಶೇರ್‌ ಆಯ್ಕೆ ಕೂಡ ಇರಲಿದೆ. ಈ ಅಪ್‌ ಲಾಂಚ್ ಆಗುವ ಮುನ್ನವೇ 175 ಮಂದಿ ಫಾಲೋವರ್ಸ್‌ ಅನ್ನು ಟ್ರಂಪ್‌ ಹೊಂದಿದ್ದಾರೆ.
ಈ ಹಿಂದೆ ಅಮೆರಿಕದ ಕ್ಯಾಪಿಟಲ್‌ ಮೇಲೆ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ್ದರು. ಆ ಹೊತ್ತಿನಲ್ಲಿ ಟ್ವಿಟರ್‌ ಹಾಗೂ ಫೇಸ್‌ ಬುಕ್‌ ನ ನಿಯಮಗಳನ್ನು ಉಲ್ಲಂಘಿಸಿದಕ್ಕೆ ಎರಡೂ ಆಪ್‌ ಗಳು ಟ್ರಂಪ್‌ ಖಾತೆಯನ್ನು ಶಾಶ್ವತ ತೆಗೆದು ಹಾಕಿತ್ತು.
ಅದಕ್ಕೆ ಟ್ವಿಟರ್‌ ಗೆ ಸೆಡ್ಡು ಹೊಡೆಯುವ ಮತ್ತೊಂದು ಟ್ರುತ್ ಸೋಷಿಯಲ್ ಅನ್ನೋ ಆಪ್‌ ಶುರು ಮಾಡಿದ್ದಾರೆ.‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!