ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಕ್ಯುಬೆಕ್ ಪ್ರಾಂತ್ಯದಲ್ಲಿ ಒಂದೇ ಸಂಸ್ಥೆಗೆ ಸೇರಿದ ಮೂರು ಕಾಲೇಜುಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಲಾಂಗ್ವೆಯಿಲ್ನಲ್ಲಿನ ಸಿಸಿಎಸ್ಕ್ಯೂ ಕಾಲೇಜ್, ಮಾಂಟ್ರಿಯಲ್ನ ಎಂ ಕಾಲೇಜು ಮತ್ತು ಶೆರ್ಬ್ರೂಕ್ನಲ್ಲಿ ಇರುವ ಸಿಡಿಇ ಕಾಲೇಜ್ ಬಂದ್ ಆಗಿದೆ. ಭಾರೀ ಶುಲ್ಕ ಪಾವತಿಸಿದ್ದ ಭಾರತೀಯ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಕಾಲೇಜುಗಳನ್ನು ದಿಢೀರ್ ಬಂದ್ ಆಗಿರುವುದರಿಂದ ಭಾರತದಿಂದ ಬಂದ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ಕಾಲೇಜು ಸ್ಥಗಿತಗೊಳಿಸುವ ಯಾವುದೇ ಮುನ್ನೆಚ್ಚರಿಕೆ ನೀಡದೆ ವಿದ್ಯಾರ್ಥಿಗಳಿಂದ ಸಾವಿರಾರು ಡಾಲರ್ ಪಡೆಯಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಒಟ್ಟಾವಾದಲ್ಲಿರುವ ಭಾರತೀಯ ಕಮಿಷನ್ ನೆರವು ಕೋರಿದ್ದಾರೆ.