Sunday, August 14, 2022

Latest Posts

ಮುಳಿಯಾರು ಗ್ರಾಮ ಗ್ರಂಥಾಲಯಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಕನ್ನಡ ಪುಸ್ತಕಗಳ ಕೊಡುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಎಡನೀರು ವಲಯ ವ್ಯಾಪ್ತಿಗೆ ಬರುವ ಮುಳಿಯಾರು ಗ್ರಾಮ ಗ್ರಂಥಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್, ಮಂಜೂರುಗೊಳಿಸಿದ 136 ವಿವಿಧ ಕನ್ನಡ ಪುಸ್ತಕಗಳನ್ನು ಜ್ಞಾನವಿಕಾಸ ವಿಭಾಗದ  ನಿರ್ದೇಶಕ ವಿಠಲ್ ಪೂಜಾರಿ  ಗ್ರಂಥಾಲಯದ ಅಧ್ಯಕ್ಷ ರಘು ಕೆ. ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಸಂಗೀತಾ, ತಾಲೂಕು ಯೋಜನಾಧಿಕಾರಿ ಮುಖೇಶ್, ಎಡನೀರು ವಲಯ ಮೇಲ್ವಿಚಾರಕ ಪ್ರಕಾಶ್ ಹಾಗೂ ಗ್ರಂಥಾಲಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss