April 10, 2026
Friday, April 10, 2026
spot_img

ಟ್ರಂಪ್ ಮಾತಿಗೆ ಡೋಂಟ್ ಕೇರ್: ಲೆಬನಾನ್​ ಮೇಲೆ ಇಸ್ರೇಲ್ ನಿಂದ ಮತ್ತೆ ವಾಯುದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಮೆರಿಕ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದು, ಆದರೆ ಇಸ್ರೇಲ್​ ಮಾತ್ರ ಯಾವುದೇ ಮಾತಿಗೂ ಕಿಮ್ಮತ್ತು ನೀಡದೆ ಲೆಬನಾನ್​ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದ್ದು, ಮತ್ತೆ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿದೆ.

ಈಗಾಗಲೇ ಕದನ ವಿರಾಮ ಘೋಷಣೆ ಬಳಿಕ ದಕ್ಷಿಣ ಲೆಬನಾನ್​ನ ಬೈರುತ್ ಮತ್ತು ಬೆಕಾ ಕಣಿವೆ ಪ್ರದೇಶದ ಮೇಲೆ ಇಸ್ರೇಲ್ ಕೇವಲ 10 ನಿಮಿಷಗಳಲ್ಲಿ ಸುಮಾರು 100 ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಭೀಕರ ದಾಳಿಯಲ್ಲಿ ಅಂದಾಜು 254 ಜನ ಮೃತಪಟ್ಟಿದ್ದು, 837 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.

ಇದೀಗ ಮತ್ತೆ ಲೆಬನಾನ್​ ನ ಅಲ್-ಅಬ್ಬಾಸ್ಸಿಹ್, ಕಾಫ್ರಾ, ಜಮೈಜ್ಮೆಹ್, ಸಫಾದ್ ಅಲ್-ಬತ್ತಿಖ್, ಮಜ್ದಲ್ ಸೆಲೆಮ್ ಮತ್ತು ದೀರ್ ಅಂತರ್ ಸೇರಿದಂತೆ ಹಲವಾರು ಪಟ್ಟಣಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಭೀಕರ ದಾಳಿ ನಡೆಸಿದೆ .

ಲೆಬನಾನ್ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯನ್ನು ಧಿಕ್ಕರಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ದಾಳಿ ಮುಂದುವರಿಸಿದ್ದು, ನಾವು ಈ ಕದನ ವಿರಾಮವನ್ನು ಒಪ್ಪಿಕೊಳ್ಳತ್ತೇವೆ, ಆದರೆ ಲೆಬನಾನ್​ ಮತ್ತು ಹೆಜ್ಬೊಲ್ಲಾ ಮೇಲೆ ದಾಳಿಯನ್ನು ಮುಂದುವರೆಸುತ್ತೇವೆಂದು ಖಡಕ್ ಆಗಿ ತಿಳಿಸಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯುದ್ಧದ ಭೀಕರತೆ ಮತ್ತಷ್ಟು ಹೆಚ್ಚಾಗುವ ಆತಂಕ ಜಾಗತಿಕ ನಾಯಕರಲ್ಲಿ ಶುರುವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !