ಗದ್ದಲ, ಪ್ರತಿಭಟನೆಗಳಿಗೆ ಡೋಂಟ್ ಕೇರ್: ಅಗ್ನಿಪಥ್ ಯೋಜನೆ ಮೂಲಕ ಸೇನೆ ಸೇರಲು ಮುಗಿಬಿದ್ದ ಯುವಜನತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರೀ ಗದ್ದಲ ಮತ್ತು ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಕೇಂದ್ರದ ಅಗ್ನಿಪಥ್ ಯೋಜನೆಗೆ ಉತ್ತಮ ಬೆಂಬಲ ಸಿಕ್ಕಿದ್ದು, ನೋಂದಣಿ ಪ್ರಕ್ರಿಯೆ ಪ್ರಾರಂಭವಾದ ಆರು ದಿನಗಳಲ್ಲಿ ಹೊಸ ನೇಮಕಾತಿ ಯೋಜನೆಯಡಿ ಭಾರತೀಯ ವಾಯುಪಡೆ(ಐಎಎಫ್) 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಜೂನ್ 24 ರಿಂದ ಅಗ್ನಿಪಥ್ ಯೋಜನೆಯ ನೋಂದಣಿ ಆರಂಭವಾಗಿದ್ದು, ಸೋಮವಾರದವರೆಗೆ 94,281 ಹಾಗೂ ಭಾನುವಾರದವರೆಗೆ 56,960 ಅರ್ಜಿಗಳು ಬಂದಿದ್ದವು.

ರಕ್ಷಣಾ ಸಚಿವಾಲಯದ ವಕ್ತಾರ ಎ. ಭಾರತ್ ಭೂಷಣ್ ಇಂದು ಟ್ವೀಟ್​ ಮಾಡಿದ್ದು,’2,01,000+ ಆಕಾಂಕ್ಷಿಗಳು ಅಗ್ನಿವೀರ್ ವಾಯು ಆಗಲು ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ಕೊನೆಯ ದಿನಾಂಕವಾಗಿದೆ’ ಎಂದು ತಿಳಿಸಿದ್ದಾರೆ.

ಭಾರತೀಯ ವಾಯುಪಡೆ ಸಹ ಈ ಕುರಿತು ಟ್ವೀಟ್ ಮಾಡಿ, ‘ಈವರೆಗೆ 1,83,634 ಭವಿಷ್ಯದ ಅಗ್ನಿವೀರರು ವೆಬ್‌ಸೈಟ್​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 5, 2022ಕ್ಕೆ ನೋಂದಣಿ ಮುಕ್ತಾಯವಾಗುತ್ತದೆ’ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!