ಗೆರೆ ದಾಟಬೇಡಿ: ಬಿಜೆಪಿಗರಿಗೆ ಎಚ್ಚರಿಕೆ ನೀಡಿದ ಮಹುವಾ ಮೊಯಿತ್ರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಜನತಾ ಪಕ್ಷವು ರಾಹುಲ್‌ ಗಾಂಧಿಯವರ ʼಟೀ-ಶರ್ಟ್‌ʼ ಕುರಿತಾಗಿ ಗೇಲಿ ಮಾಡಿದ್ದಕ್ಕೆ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿದ್ದು ಬಿಜೆಪಿಯವರು ಗೆರೆ ದಾಟಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಮಹುವಾ ಮೊಯಿತ್ರಾ “ಬಿಜೆಪಿಯವರು ಪ್ರತಿಪಕ್ಷಗಳ ಸದಸ್ಯರ ವೈಯುಕ್ತಿಕ ಬಟ್ಟೆ ಮತ್ತು ವಸ್ತುಗಳ ಕುರಿತು ಅಡ್ಡಗಾಲು ಹಾಕುವುದು ಅಥವಾ ಟೀಕೆ ಮಾಡುವುದನ್ನು ಮಾಡಬಾರದು ಎಂದು ಗಂಭೀರವಾಗಿ ಸಲಹೆ ನೀಡುತ್ತೇನೆ. ನಾವು ಕೂಡ ಬಿಜೆಪಿ ಸಂಸದರು ಧರಿಸುವ ಕೈಗಡಿಯಾರಗಳು, ಪೆನ್ನುಗಳು, ಶೂಗಳು, ಉಂಗುರಗಳು ಮತ್ತು ಬಟ್ಟೆಗಳ ಕುರಿತು ಅದೇ ರೀತಿ ಟೀಕೆ ಮಾಡಲು ಪ್ರಾರಂಭಿಸಿದರೆ, ಈ ಆಟ ಪ್ರಾರಂಭಿಸಿದ ನೀವೇ ಅದರಲ್ಲಿ ನಾಶವಾಗುತ್ತೀರಿ” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಮಹುವಾ ಮೊಯಿತ್ರಾ ಅವರ ಮೇಲೂ ಟೀಕೆಗಳು ವ್ಯಕ್ತವಾಗಿದ್ದವು. ಸದನದಲ್ಲಿ ತಮ್ಮ ದುಬಾರಿ ಲೂಯಿ ವಿಟಾನ್‌ ಬ್ಯಾಗ್‌ ಅನ್ನು ಬಚ್ಚಿಟ್ಟುಕೊಂಡು ಬಡತನದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಕುರಿತು ಅವರ ಮೇಲೆ ಟೀಕೆಗಳಾಗಿದ್ದವು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!