July 18, 2026
Saturday, July 18, 2026
spot_img

Don’t Do | ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಿದ್ರೆ ಆರೋಗ್ಯ ಹಾಳು!

ಉತ್ತಮ ಆರೋಗ್ಯಕ್ಕೆ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯ ನಿದ್ದೆ ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಅನೇಕರು ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾತ್ರಿ ಮಲಗುವ ಮುನ್ನ ನಾವು ಮಾಡುವ ಕೆಲವು ಸಣ್ಣ ತಪ್ಪುಗಳೇ ಇದಕ್ಕೆ ಮುಖ್ಯ ಕಾರಣ. ಅವುಗಳನ್ನು ಇಂದೇ ತಿದ್ದಿಕೊಳ್ಳಿ.

1. ಮೊಬೈಲ್ ಫೋನ್ ಬಳಕೆ ಬೇಡ

ಮಲಗುವ ಮುನ್ನ ಕತ್ತಲಲ್ಲಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ವೀಕ್ಷಿಸುವುದರಿಂದ, ಅವುಗಳಿಂದ ಹೊರಹೊಮ್ಮುವ ‘ಬ್ಲೂ ಲೈಟ್’ (Blue Light) ನಮ್ಮ ಮೆಲಟೋನಿನ್ ಹಾರ್ಮೋನ್ ಉತ್ಪತ್ತಿಯನ್ನು ಕುಂಠಿತಗೊಳಿಸುತ್ತದೆ. ಇದು ನಿದ್ದೆ ಬರದಂತೆ ತಡೆಯುತ್ತದೆ.

2. ತಡರಾತ್ರಿಯ ಹೆವಿ ಡಿನ್ನರ್ (ಭಾರೀ ಊಟ)

ರಾತ್ರಿ ಮಲಗುವ ಮುನ್ನ ಅತಿಯಾಗಿ ಅಥವಾ ಎಣ್ಣೆಯುಕ್ತ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಎದೆಯುರಿ, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಿ ನಿದ್ದೆಗೆ ಭಂಗ ತರುತ್ತದೆ. ಮಲಗುವ ಕನಿಷ್ಠ 2 ಗಂಟೆ ಮುಂಚಿತವಾಗಿ ಲಘು ಆಹಾರ ಸೇವಿಸಿ.

3. ಕೆಫೀನ್ ಮುಕ್ತವಾಗಿರಿ (ಚಹಾ-ಕಾಫಿ)

ಕೆಲವರಿಗೆ ರಾತ್ರಿ ಊಟದ ನಂತರ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಇದರಲ್ಲಿರುವ ಕೆಫೀನ್ ಅಂಶವು ಮೆದುಳನ್ನು ಜಾಗೃತಗೊಳಿಸಿ, ನಿದ್ದೆಯ ಮೂಡ್ ಅನ್ನು ಕೆಡಿಸುತ್ತದೆ.

4. ಅತಿಯಾದ ಆಲೋಚನೆ ಮತ್ತು ಒತ್ತಡ

ದಿನವಿಡೀ ನಡೆದ ಘಟನೆಗಳ ಬಗ್ಗೆ ಹಾಸಿಗೆಯಲ್ಲಿ ಮಲಗಿ ಯೋಚಿಸುವುದು ಒತ್ತಡವನ್ನು ಹೆಚ್ಚಿಸುತ್ತದೆ. ಮನಸ್ಸು ಶಾಂತವಾಗಿಲ್ಲದಿದ್ದರೆ ಗಾಢ ನಿದ್ದೆ (Deep Sleep) ಅಸಾಧ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !