ಸ್ವಾತಂತ್ರ್ಯೋತ್ಸವದ ಎದುರಲ್ಲಿ ಈ ಚಿತ್ರಗಳನ್ನು ನೋಡಲು ಮರೆಯದಿರಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಇಂದು ಪ್ರಧಾನಿಯವರ ಕರೆಗೆ ಸ್ಪಂದಿಸಿದ ಕೋಟ್ಯಂತರ ಭಾರತೀಯರು ತಮ್ಮ ಮನೆ ಮನಗಳಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿ ದೇಶಪ್ರೇಮ ಮರೆದಿದ್ದಾರೆ. ನಿಮ್ಮ ದೇಶಪ್ರೇಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು, ಭಾರತದ ಸ್ವಾತಂತ್ರ್ಯ ಹೋರಾಟದ ವೀರರ ಕಥೆಗಳನ್ನು ನೋಡಿ ಸ್ಮರಿಸಲು, ದೇಶಭಕ್ತಿಯ ಸಿಂಚನದಲ್ಲಿ ಮಿಂದೇಳಲು ನೀವು ಈ ಕೆಳಗಿನ ಚಲನ ಚಿತ್ರವನ್ನು ವೀಕ್ಷಿಸವ ಮೂಲಕ ಮನರಂಜನೆಯೊಟ್ಟಿಗೆ ದೇಶಭಕ್ತಿಯನ್ನು ಆಚರಿಸಬಹುದು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
2012ರಲ್ಲಿ ತೆರೆಕಂಡ ಛಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಈ ಚಿತ್ರವು ಸ್ವಾತಂತ್ರ್ಯಹೋರಾಟದ ನಂದಾದೀಪ ಸಂಗೊಳ್ಳಿ ರಾಯಣ್ಣನ ಕಥೆಯನ್ನು ಪ್ರಸ್ತುತ ಪಡಿಸುತ್ತದೆ. ಜಯಪ್ರದಾ, ಉಮಾಶ್ರೀ, ಶಶಿಕುಮಾರ್‌, ದೊಡ್ಡಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ.

ದಿ ಲೆಜೆಂಡ್‌ ಆಫ್‌ ಭಗತ್‌ ಸಿಂಗ್‌
2002ರಲ್ಲಿ ತೆರೆಕಂಡ ಈ ಚಿತ್ರ ಭಾರತದ ತರುಣರ ಎದೆಗಳಲ್ಲಿ ಈಗಲೂ ದೇಶಭಕ್ತಿಯನ್ನು ಪುಡಿದೇಳಿಸುವ ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಜೀವನವನ್ನು ವಿವರಿಸುತ್ತದೆ. ಅಜಯ್‌ ದೇವಗನ್‌, ಸುಶಾಂತ್‌ ಸಿಂಗ್‌, ಡಿಸಂತೋಷ್‌ ಅಭಿನಯದ ಈ ಚಿತ್ರ ನಿಮ್ಮ ಕಣ್ಣಾಲೆಗಳನ್ನು ಖಂಡಿತ ಒದ್ದೆಯಾಗಿಸುತ್ತದೆ.

ವೀರಪ್ಪನಾಯಕ
1999ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್‌, ಶ್ರುತಿ ಅಭಿನಯದ ಈ ಚಿತ್ರ ಅಪ್ಪಟ ಗಾಂಧಿವಾದಿಯೊಬ್ಬನ ದೇಶಪ್ರೇಮವನ್ನು ನಿಮ್ಮ ಮನದಾಳಕ್ಕಿಳಿಸುತ್ತದೆ.

 

ನೇತಾಜಿ ಸುಭಾಶ್‌ ಚಂದ್ರಬೋಸ್:‌ ದಿ ಫಾರ್‌ಗಾಟನ್‌ ಹೀರೋ
2004ರಲ್ಲಿ ತೆರೆಕಂಡ ಚಿತ್ರರಂಗದ ದಂತಕಥೆ ಶ್ಯಾಮ್ ಬೆನಗಲ್ ಬರೆದು ನಿರ್ದೇಶಿಸಿದ ಈ ಚಲನಚಿತ್ರವು ಜಪಾನ್ ಮತ್ತು ಜರ್ಮನಿಯೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಸೈನ್ಯವನ್ನು ಸಂಘಟಿಸಿ ತೆರೆಮರೆಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ನೇತಾಜಿ ಪಾತ್ರವನ್ನು ಸಚಿನ್ ಖೇಡೇಕರ್ ನಿರ್ವಹಿಸಿದ್ದಾರೆ.

ಸರ್ದಾರ್‌ ಉದ್ಧಮ್‌
2021ರಲ್ಲಿ ತೆರೆಕಂಡ ಶೂಜಿತ್ ಸಿರ್ಕಾರ್ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮತ್ತು ಸರ್ದಾರ್ ಉಧಮ್ ಸಿಂಗ್ ಅವರ ಜೀವನಚರಿತ್ರೆಯ ಕುರಿತಾದ ಈ ಚಿತ್ರವು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸುತ್ತ ಸುತ್ತುತ್ತದೆ. ಶೀರ್ಷಿಕೆ ಪಾತ್ರವನ್ನು ವಿಕ್ಕಿ ಕೌಶಲ್ ನಿರ್ವಹಿಸಿದ್ದಾರೆ. ಅಮೇಜಾನ್‌ ಫ್ರೈಮ್‌ ನಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಎಲ್‌ಒಸಿ ಕಾರ್ಗಿಲ್:‌
1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ವಿಜಯದ ಕುರಿತು J.P. ದತ್ತಾ ಅವರ ದೇಶಭಕ್ತಿಯ ಚಲನಚಿತ್ರವು ಮಾತನಾಡುತ್ತದೆ. ಚಿತ್ರದಲ್ಲಿ ಸಂಜಯ್ ದತ್, ಅಭಿಷೇಕ್ ಬಚ್ಚನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌
2016 ರ ಉರಿ ದಾಳಿಯ ಪ್ರತೀಕಾರದ ಸರ್ಜಿಕಲ್‌ ಸ್ಟ್ರೈಕ್‌ ಕುರಿತಾದ ಚಿತ್ರವಿದು. ಸ್ವಾತಂತ್ರ್ಯದ ಕಥೆಯಲ್ಲದಿದ್ದರೂ ದೇಶಭಕ್ತಿಯನ್ನು ಹೆಚ್ಚಿಸುವ ತಾಕತ್ತು ಈ ಚಿತ್ರಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!