August 24, 2026
Monday, August 24, 2026
spot_img

ಗಾಢ ನಿದ್ರೆ, ಸುಲಭ ಜೀರ್ಣಕ್ರಿಯೆಗಾಗಿ ರಾತ್ರಿ ಹೊತ್ತು ಈ 4 ಹಣ್ಣುಗಳನ್ನು ಮಿಸ್ ಮಾಡ್ಬೇಡಿ!

ಸಾಮಾನ್ಯವಾಗಿ ರಾತ್ರಿ ಊಟವಾದ ತಕ್ಷಣ ಹಣ್ಣು ತಿನ್ನುವುದು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ಕೆಲವು ಹಣ್ಣುಗಳು ನಿಮ್ಮ ನಿದ್ರೆಯನ್ನು ಉತ್ತಮವಾಗಿಸಿ, ಆರೋಗ್ಯವನ್ನು ವೃದ್ಧಿಸುತ್ತವೆ. ನೀವು ರಾತ್ರಿ ಹಣ್ಣು ತಿನ್ನಲೇಬೇಕು ಎಂದಿದ್ದರೆ ಇವು ನಿಮ್ಮ ಪಟ್ಟಿಯಲ್ಲಿರಲಿ:

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಸ್ನಾಯುಗಳನ್ನು ಸಡಿಲಗೊಳಿಸಲು (Muscle relaxant) ಸಹಾಯ ಮಾಡುತ್ತದೆ ಮತ್ತು ಇದರಲ್ಲಿರುವ ‘ಟ್ರಿಪ್ಟೊಫಾನ್’ ಅಂಶವು ನಿಮಗೆ ಬೇಗ ನಿದ್ರೆ ಹತ್ತುವಂತೆ ಮಾಡುತ್ತದೆ.

ಕಿವಿ ಹಣ್ಣು
ಕಿವಿ ಹಣ್ಣು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಹೆಸರುವಾಸಿ. ಇದರಲ್ಲಿರುವ ಸಿರೊಟೋನಿನ್ ಅಂಶವು ಮೆದುಳನ್ನು ಶಾಂತಗೊಳಿಸಿ, ಗಾಢ ನಿದ್ರೆಗೆ ಜಾರಲು ನೆರವಾಗುತ್ತದೆ.

ಪಪ್ಪಾಯಿ
ಒಂದು ವೇಳೆ ನೀವು ರಾತ್ರಿ ಸ್ವಲ್ಪ ಭಾರೀ ಊಟ ಮಾಡಿದ್ದರೆ, ಸ್ವಲ್ಪ ಪಪ್ಪಾಯಿ ಸೇವಿಸುವುದು ಉತ್ತಮ. ಇದರಲ್ಲಿರುವ ‘ಪಪೈನ್’ ಎಂಬ ಕಿಣ್ವವು ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಮಲಬದ್ಧತೆಯನ್ನು ತಡೆಯುತ್ತದೆ.

ಸೇಬು
ಸೇಬಿನಲ್ಲಿರುವ ಫೈಬರ್ ಅಂಶವು ಹೊಟ್ಟೆಯನ್ನು ಹಗುರವಾಗಿಸುತ್ತದೆ. ಆದರೆ ಇದನ್ನು ಮಿತವಾಗಿ ಸೇವಿಸುವುದು ಒಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !