Wednesday, December 6, 2023

Latest Posts

‘ಬಜರಂಗಿ ಭಾಯಿಜಾನ್​’ ಚಿತ್ರದ ಮುನ್ನಿಗೆ ಒಲಿದ ಭಾರತ ರತ್ನ ಡಾ. ಅಂಬೇಡ್ಕರ್​ ಪ್ರಶಸ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​​ ನಟ ಸಲ್ಮಾನ್ ಖಾನ್ ಅಭಿನಯದ ‘ಬಜರಂಗಿ ಭಾಯಿಜಾನ್​’ ಚಿತ್ರದಲ್ಲಿ ಮುನ್ನಿಯಾಗಿ ನಟಿಸಿಎಲ್ಲರ ಮನಗೆದ್ದ ನಟಿ ಹರ್ಷಾಲಿ ಮಲ್ಹೋತ್ರಾಗೆ ಭಾರತ ರತ್ನ ಡಾ. ಅಂಬೇಡ್ಕರ್​ ಪ್ರಶಸ್ತಿ ಒಲಿದು ಬಂದಿದೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್​​ ಸಿಂಗ್​​​ ಕೋಶಿಯಾರಿ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಜೊತೆಗೆ, ಪ್ರಶಸ್ತಿಯನ್ನು ಸಲ್ಮಾನ್ ಖಾನ್​ಗೆ ಅರ್ಪಿಸಿದ್ದಾರೆ.
13 ವರ್ಷದ ಹರ್ಷಾಲಿ ಚಿತ್ರದಲ್ಲಿ ಪಾಕಿಸ್ತಾನಿ ಮುಸ್ಲಿಂ ಬಾಲಕಿ ಮುನ್ನಿಯಾಗಿ ನಟಿಸಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಇದರ ಜೊತೆಗೆ ನಟ ಸಲ್ಮಾನ್‌ ಖಾನ್‌ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಬಜರಂಗಿ ಭಾಯಿಜಾನ್​-2 ಚಿತ್ರದಲ್ಲಿ ನಟಿಸಿವುದಾಗಿ ಘೋಷಣೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!