ರಕ್ಷಣಾ ಇಲಾಖೆಯ ಭೂ ರಕ್ಷಣೆಗೋಸ್ಕರ ಆಯ್ತು ಸ್ವಾತಂತ್ರ್ಯಾನಂತರದ ಮೊದಲ ಸರ್ವೇ- ತ್ರಿಡಿ, ಡ್ರೋನ್, ಉಪಗ್ರಹ ಚಿತ್ರಗಳ ತಂತ್ರಜ್ಞಾನ ಸಮಾಗಮ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಮೊದಲ ಬಾರಿ ಆಧುನಿಕ ತಂತ್ರಜ್ಞಾನ ಬಳಸಿ ಕೇಂದ್ರ ಸರಕಾರ ರಕ್ಷಣಾ ಸಚಿವಾಲಯದ 17.78 ಲಕ್ಷ ಎಕರೆ ಭೂಮಿಯ ಸಮೀಕ್ಷೆ ಕೈಗೊಂಡಿದೆ.

ರಕ್ಷಣಾ ಸಚಿವಾಲಯದ ಕಚೇರಿಗಳು ನಿರ್ವಹಿಸುವ ದಾಖಲೆಗಳ ಪ್ರಕಾರ, ರಕ್ಷಣಾ ಸಚಿವಾಲಯವು ಸುಮಾರು 17.99 ಲಕ್ಷ ಎಕರೆ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಹೊಂದಿದೆ. ಅದರಲ್ಲಿ ಸುಮಾರು 1.61 ಲಕ್ಷ ಎಕರೆಗಳು 62 ಮಿಲಿಟರಿ ಕಂಟೋನ್ಮೆಂಟ್‌ಗಳಲ್ಲಿ ನೆಲೆಗೊಂಡಿದೆ. ಸುಮಾರು 16.38 ಲಕ್ಷ ಎಕರೆ ಭೂಮಿ ಕಂಟೋನ್ಮೆಂಟ್‌ನ ಹೊರಗಿನ ಪ್ರದೇಶಗಳಲ್ಲಿ ಹರಡಿಕೊಂಡಿದೆ. ಈ 16.38 ಲಕ್ಷ ಎಕರೆ ಭೂಮಿಯಲ್ಲಿ, ಸುಮಾರು 18ಸಾವಿರ ಎಕರೆಗಳನ್ನು ಇತರ ಸರಕಾರಿ ಇಲಾಖೆಗಳಿಗೆ ವರ್ಗಾಯಿಸಲು ಹಾಗೂ ರಕ್ಷಣಾ ಇಲಾಖೆ ದಾಖಲೆಯಿಂದ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.

2018ರಿಂದ ಪ್ರಾರಂಭವಾದ ಸಮೀಕ್ಷೆ

ರಕ್ಷಣಾ ಭೂಮಿಯನ್ನು ರಕ್ಷಿಸಲು, ಭೂ ದಾಖಲೆಗಳ ನಕರಣ, ನಕ್ಷೆಗಳು ಮತ್ತು ಅತಿಕ್ರಮಣಗಳನ್ನು ತಡೆಗಟ್ಟಲು ರಕ್ಷಣಾ ಭೂಮಿಗಳ ಸ್ಪಷ್ಟ ಗಡಿರೇಖೆ ಮತ್ತು ಗಡಿ ಸಮೀಕ್ಷೆ ಮತ್ತು ಗಡಿಗಳನ್ನು ನಿಗದಿಪಡಿಸುವುದು ಆವಶ್ಯಕ. ಈ ನಿಟ್ಟಿನಲ್ಲಿ, ಡೈರೆಕ್ಟರೇಟ್ ಜನರಲ್ ಡಿಫೆನ್ಸ್ ಎಸ್ಟೇಟ್ಸ್, ರಕ್ಷಣಾ ಸಚಿವಾಲಯವು ಅಕ್ಟೋಬರ್ 2018ರಿಂದ ರಕ್ಷಣಾ ಭೂಮಿಯ ಸಮೀಕ್ಷೆಯನ್ನು ಪ್ರಾರಂಭಿಸಿತು.

ಸ್ವಾತಂತ್ರ್ಯಾನಂತರ ಮೊದಲ ಸರ್ವೇ

ಕಂಟೋನ್ಮೆಂಟ್‌ಗಳ ಒಳಗಿನ ಸುಮಾರು 1.61 ಲಕ್ಷ ಎಕರೆ ರಕ್ಷಣಾ ಭೂಮಿ ಮತ್ತು ಕಂಟೋನ್‌ಮೆಂಟ್‌ಗಳ ಹೊರಗೆ 16.17 ಲಕ್ಷ ಎಕರೆ (ಒಟ್ಟು 17.78 ಲಕ್ಷ ಎಕರೆ) ಸಮೀಕ್ಷೆಯ ಸಂಪೂರ್ಣ ಸಮೀಕ್ಷೆ ಪೂರ್ಣಗೊಂಡಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಇಡೀ ರಕ್ಷಣಾ ಭೂಮಿಯನ್ನು ಇತ್ತೀಚಿನ ಸರ್ವೇ ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ರಾಜ್ಯ ಸರಕಾರಗಳ ಕಂದಾಯ ಅಧಿಕಾರಿಗಳ ಸಹಯೋಗದಲ್ಲಿ ಹೆಚ್ಚಿನ ಸಂಖ್ಯೆಯ ಪಾಕೆಟ್‌ಗಳಲ್ಲಿ ಸರ್ವೇ ಮಾಡಿರುವುದು ಗಮನಾರ್ಹ ಸಾಧನೆ.

ತ್ರಿಡಿ, ಡ್ರೋನ್, ಉಪಗ್ರಹ ಚಿತ್ರ ಬಳಕೆ

ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್ (ಇಟಿಎಸ್) ಮತ್ತು ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಡಿಜಿಪಿಎಸ್) ನಂತಹ ಆಧುನಿಕ ಸಮೀಕ್ಷೆ ತಂತ್ರಜ್ಞಾನಗಳನ್ನು ಸಮೀಕ್ಷೆಯಲ್ಲಿ ಬಳಸಲಾಗಿದೆ. ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು, ತ್ರಿಡಿ ಆಯಾಮದ ಮಾದರಿ, ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಆಧಾರಿತ ಸಮೀಕ್ಷೆಯನ್ನು ವಿಶ್ವಾಸಾರ್ಹ, ದೃಢ ಮತ್ತು ಸಮಯ ಮಿತಿ ಫಲಿತಾಂಶಗಳಿಗಾಗಿ ಬಳಸಿಕೊಳ್ಳಲಾಗಿದೆ.

ಮೊದಲ ಬಾರಿಗೆ ಡ್ರೋನ್ ಚಿತ್ರಣ ಆಧಾರಿತ ಸಮೀಕ್ಷೆ ತಂತ್ರಜ್ಞಾನವನ್ನು ರಾಜಸ್ಥಾನದಲ್ಲಿ ಲಕ್ಷಗಟ್ಟಲೆ ಎಕರೆ ರಕ್ಷಣಾ ಭೂಮಿಯ ಸಮೀಕ್ಷೆಗೆ ಬಳಸಲಾಯಿತು. ಇಡೀ ಪ್ರದೇಶವನ್ನು ಭಾರತದ ಸರ್ವೇಯರ್ ಜನರಲ್ ಸಹಾಯದಿಂದ ಕೆಲವೇ ವಾರಗಳಲ್ಲಿ ಸಮೀಕ್ಷೆ ಮಾಡಲಾಯಿತು. ಇದು ಮೊದಲು ವರ್ಷಗಳ ಕಾಲ ತೆಗೆದುಕೊಳ್ಳುತ್ತಿತ್ತು. ಇದಲ್ಲದೆ, ಉಪಗ್ರಹ ಚಿತ್ರಣ ಆಧಾರಿತ ಸಮೀಕ್ಷೆಯನ್ನು ಮೊದಲ ಬಾರಿಗೆ ಅನೇಕ ರಕ್ಷಣಾ ಭೂಮಿ ಪಾಕೆಟ್‌ಗಳಿಗೆ ಮಾಡಲಾಯಿತು. ಭಾಭಾ ಅಟೊಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ) ಸಹಯೋಗದೊಂದಿಗೆ ಡಿಜಿಟಲ್ ಎಲಿವೇಶನ್ ಮಾಡೆಲ್ (ಡಿಇಎಂ) ಅನ್ನು ಬಳಸಿಕೊಂಡು ಗುಡ್ಡಗಾಡು ಪ್ರದೇಶದಲ್ಲಿ ರಕ್ಷಣಾ ಭೂಮಿಯನ್ನು ಉತ್ತಮವಾಗಿ ದೃಶ್ಯೀಕರಿಸಲು 3ಡಿ ಮಾದರಿ ತಂತ್ರಗಳನ್ನು ಪರಿಚಯಿಸಲಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!