ಬಿಜೆಪಿ ಎಸ್ಸಿ‌ ಮೋರ್ಚಾದ ಉಪಾಧ್ಯಕ್ಷರಾಗಿ ಡಾ.ಎಂ.ಟಿ.ಮಲ್ಲೇಶಪ್ಪ‌ ನೇಮಕ

ಹೊಸದಿಗಂತ ವರದಿ,ವಿಜಯನಗರ:

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ‌‌ ಡಾ. ಎಂ. ಟಿ. ಮಲ್ಲೇಶಪ್ಪ ಅವರು ‌ನೇಮಕಗೊಂಡಿದ್ದಾರೆ.
ಕಳೆದ‌ ಸುಮಾರು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ,‌ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ‌ಸೇವೆ ಸಲ್ಲಿಸಿ, ಮುಖ್ಯಗುರು ಸ್ಥಾನದಿಂದ ನಿವೃತ್ತರಾದ ಬಳಿಕ ರಾಜಕೀಯ ಅಖಾಡಕ್ಕೆ ಇಳಿದು ಜನ ಸೇವೆ ಮಾಡಲು ‌ಮುಂದಾಗಿದ್ದಾರೆ. ಇತ್ತೀಚೆಗೆ ಬಿಜೆಪಿ ತತ್ವ ಹಾಗೂ ಸಿದ್ಧಾಂತಗಳನ್ನು ‌ಮೆಚ್ಚಿ‌ ಬಿಜೆಪಿ‌ ಸೇರ್ಪಡೆಯಾಗಿದ್ದರು. ಇವರ ಸೇವಾ ಕಾರ್ಯ ಗಮನಿಸಿದ ಪಕ್ಷದ ಪ್ರಮುಖರು ಬಿಜೆಪಿ ಎಸ್ಸಿ ಮೋರ್ಚಾದ ವಿಜಯನಗರ ಜಿಲ್ಲೆಯ ನೂತನ ಉಪಾಧ್ಯಕ್ಷರನ್ನಾಗಿ‌ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ವಿಜಯನಗರ ಜಿಲ್ಲೆಯ ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ‌ನಡೆದ ಸಭೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿ‌ ನೂತನ‌ ಪದಾಧಿಕಾರಿಗಳನ್ನು‌ ನೇಮಕಗೊಳಿಸಿದರು. ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಹಟ್ಟಿ ಗ್ರಾಮದ ಡಾ.ಎಂ.ಟಿ ಮಲ್ಲೇಶ್ ಅವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ.ಎಂ.ಟಿ. ಮಲ್ಲೇಶ್ವರ ಅವರಿಗೆ ಅನೇಕ ಸ್ನೇಹಿತರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಡಾ. ಎಂ.ಟಿ ಮಲ್ಲೇಶ್ ಅವರು ಮಾತನಾಡಿ, ನನ್ನನ್ನು ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಾಡಲು ಸಹಕರಿಸಿದ ಎಲ್ಲ ಮುಖಂಡರಿಗೂ ಧನ್ಯವಾದಗಳನ್ನು ತಿಳಿಸುವೆ, ಪಕ್ಷ ನೀಡಿದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಶ್ರಮಿಸುವೆ. ವಿಜಯನಗರ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ
ಪಕ್ಷದ ಬಾವುಟ ಹಾರಲಿದೆ. ಇದರಲ್ಲಿ ಅನುಮಾನ ಬೇಡ, ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮ ಸರ್ಕಾರವೇ ಇದ್ದು, ಅವಧಿಯಲ್ಲಿ ವಿಜಯನಗರ ನೂತನ ಜಿಲ್ಲೆಯ ಅಭಿವೃದ್ಧಿ ಮಾದರಿಯಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!