ಹೊಸದಿಗಂತ ವರದಿ ಬಾಗಲಕೋಟೆ:
ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ನಾಮಪತ್ರ ಸಲ್ಲಿಸಿದರು.
ಮನೆಯಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ಚುನಾವಣಾ ಆಧಿಕಾರಿಗಳಾದ ಶ್ವೇತಾ ಬಿಡಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಶ್ರೀ ಮತಿ ರಾಜೇಶ್ವರಿ ವೀರಣ್ಣ ಚರಂತಿಮಠ, ಜಿ.ಎಸ್.ಪಾಟೀಲ. ಎಮ್.ಎ.ತೇಸಲಂಗ್,ರಾಜು ಎಮ್.ಪಾಟೀಲ, ಡಾ.ನವೀನ ಚರಂತಿಮಠ, ಜಯಂತ ಕುರಂದವಾಡ, ರಾಜು ನಾಯ್ಕರ,ಕಪ್ಪಯ್ಯ ಮುತ್ತಿನಮಠ, ಮಹೇಶ ಅಥಣಿ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಡರ, ಸುರೇಶ ಕೊಣ್ಣೂರ ಸೇರಿದಂತೆ ಅನೇಕ ಭಾಗವಹಿಸಿದ್ದರು.
ನಾಳೆ ದಿನಾಂಕ 20 ರಂದು ಮತಕ್ಷೇತ್ರದ ಜನತೆಯೊಂದಿಗೆ ಭವ್ಯ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದು
ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಶಾಸಕರು ತಿಳಿಸಿದರು.