ಕಳೆದ ಆರು ದಶಕದಲ್ಲಿ ಜನಸಂಖ್ಯೆ ಕುಸಿತ ಕಂಡ ಚೀನಾ: ತಲೆಕೆಳಗಾಯ್ತು ವಿಶ್ವಸಂಸ್ಥೆಯ ಲೆಕ್ಕಾಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆಂಬ ಹೆಸರು ಚೀನಾಗಿತ್ತು. ಆದರೆ ವಿಶ್ವಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಭಾರತವು ಈಗ ಚೀನಾಗಿಂತ 2.9 ಮಿಲಿಯನ್ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ.

ಕಳೆದ ಆರು ದಶಕಗಳಲ್ಲಿ ಚೀನಾದ ಒಟ್ಟಾರೆ ಜನಸಂಖ್ಯೆಯು ಮೊದಲ ಬಾರಿಗೆ ಕುಸಿತವನ್ನು ದಾಖಲಿಸಿದೆ. 2022ರ ಅಂತ್ಯದ ವೇಳೆಗೆ ಭಾರತದ ಜನಸಂಖ್ಯೆ 140 ಕೋಟಿ ದಾಟಿತ್ತು. ಇದು ಚೀನಾದ ಜನಸಂಖ್ಯೆಗಿಂತ 50 ಲಕ್ಷದಷ್ಟು ಹೆಚ್ಚಾಗಿದೆ.

ಇದೀಗ ಭಾರತದ ಜನಸಂಖ್ಯೆ 1,428.6 ಮಿಲಿಯನ್ ಆಗಿದ್ದರೆ, ಚೀನಾದ ಜನಸಂಖ್ಯೆ 1,425.7 ಮಿಲಿಯನ್ ಆಗಿದ್ದು, 2.9 ಮಿಲಿಯನ್ ವ್ಯತ್ಯಾಸವಾಗಿದೆ.

ವಿಶ್ವಸಂಸ್ಥೆಯ ವರದಿ-2020 ರ ಪ್ರಕಾರ, ಭಾರತವು ಈ ವರ್ಷ ಚೀನಾವನ್ನು ಬಿಟ್ಟು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ವರದಿಯ ಪ್ರಕಾರ, ಚೀನಾದ 1.426 ಶತಕೋಟಿಗೆ ಹೋಲಿಸಿದರೆ 2022 ರಲ್ಲಿ ಭಾರತದ ಜನಸಂಖ್ಯೆಯು 1.412 ಬಿಲಿಯನ್ ಆಗಿತ್ತು. 2050 ರಲ್ಲಿ ಭಾರತದ ಜನಸಂಖ್ಯೆಯು 1.668 ಶತಕೋಟಿ ಎಂದು ಅಂದಾಜಿಸಲಾಗಿದೆ. ಆ ಸಮಯದಲ್ಲಿ ಚೀನಾದ ಜನಸಂಖ್ಯೆ 1.317 ಬಿಲಿಯನ್‌ನಷ್ಟಿರಲಿದೆ. 2023ರ ಜನವರಿ 18ರ ವೇಳೆಗೆ ಭಾರತದ ಜನಸಂಖ್ಯೆ 1.423 ಬಿಲಿಯನ್‌ ದಾಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!