Friday, June 2, 2023

Latest Posts

ಪಾಕ್‌ಗೆ ರಹಸ್ಯ ಮಾಹಿತಿ ಸೋರಿಕೆ: ಡಿಆರ್‌ಡಿಒ ವಿಜ್ಞಾನಿ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ರಕ್ಷಣಾ ವ್ಯವಸ್ಥೆಯ ಕೆಲವು ಗೌಪ್ಯ ಮಾಹಿತಿಗಳನ್ನು ಪಾಕಿಸ್ಥಾನ‌ದ ಗುಪ್ತಚರ ಏಜೆಂಟ್‌ಗೆ ಸೋರಿಕೆ ಮಾಡಿರುವ ಆರೋಪದ ಮೇರೆಗೆ ವಿಜ್ಞಾನಿಯೊಬ್ಬರನ್ನು ಬಂಧಿಸಲಾಗಿದೆ.

ರಕ್ಷಣ ಸಂಶೋಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಹಿರಿಯ ಹುದ್ದೆಯಲ್ಲಿದ್ದ ಅಧಿಕಾರಿಯನ್ನು ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ತಂಡ (ಎಟಿಎಸ್‌) ಅಧಿಕಾರಿಗಳು ಅರೆಸ್ಟ್‌ ಮಾಡಿದ್ದಾರೆ. ಈ ಕುರಿತು ಎಟಿಎಸ್‌ ಪ್ರಕಟಣೆಯನ್ನೂ ಹೊರಡಿಸಿದೆ. ಅದರಲ್ಲಿ ಆರೋಪಿಯು ಪಾಕಿಸ್ಥಾನ‌ದ ಗುಪ್ತಚರ ಸಂಸ್ಥೆಯ ಏಜೆಂಟ್‌ ಜೊತೆಗೆ ವಾಟ್ಸಪ್ ಹಾಗೂ ವೀಡಿಯೋ ಕಾಲ್‌ಗ‌ಳ ಮೂಲಕ ಸಂಪರ್ಕದಲ್ಲಿದ್ದರು‌ ಎಂದು ಹೇಳಿದೆ.

ವಿಜ್ಞಾನಿಯು ಅಧಿಕಾರ ದುರುಪಯೋಗ ಪಡಿಸಿಕೊಂಡು, ದೇಶದ ಭದ್ರತೆಗೆ ತೊಡಕಾಗುವಂಥ ಗೌಪ್ಯ ಮಾಹಿತಿಗಳನ್ನು ಪಾಕ್‌ ಗುಪ್ತಚರ ಸಂಸ್ಥೆಗೆ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆ ಮುಂಬಯಿಯ ಕಲಾಚೌಕಿ ಎಟಿಎಸ್‌ ಘಟಕದಲ್ಲಿ ರಹಸ್ಯ ಮಾಹಿತಿ ಸೋರಿಕೆ ಸಂಬಂಧಿತ ಕಾಯ್ದೆಗಳ ಅನ್ವಯ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಘಟನೆಯು ಹನಿಟ್ರ್ಯಾಪ್‌ ಎಂದು ಆರೋಪಿ ತಿಳಿಸಿದ್ದಾರೆ. ಆದ್ದರಿಂದ ಆ ನಿಟ್ಟಿನಲ್ಲೂ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!