ಮುಟ್ಟಿನ ಬಗ್ಗೆ ಯಾಕೆ ಮಾತನಾಡಬಾರದು? ಆ ಕಾಲದಲ್ಲೇ ಹೀಗೆ ಧ್ವನಿಯೆತ್ತಿದ್ರು ಸ್ಮೃತಿ ಇರಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು 25 ವರ್ಷಗಳ ಹಿಂದೆ ಮಾಡಿದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಗ್ಲಾಮರ್ ಜಗತ್ತಿನಲ್ಲಿ ನಟಿಯರು ಯಾವುದೇ ಸಿನಿಮಾ ಅಥವಾ ಜಾಹೀರಾತನ್ನು ಒಪ್ಪಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸುತ್ತಾರೆ. ಏಕೆಂದರೆ ಏನು ಮಾಡಿದರೂ ಅದು ಇತರರ ಮೇಲೆ ಬಹಳ ಪರಿಣಾಮ ಬೀರುವುದರಿಂದ ತುಸು ಜಾಗ್ರತೆ ಅತ್ಯಗತ್ಯ. 25 ವರ್ಷಗಳ ಹಿಂದೆ ಸ್ಮೃತಿ ಇರಾನಿಗೆ ದೊಡ್ಡ ಕಂಪನಿಯೊಂದರ ಜಾಹೀರಾತಿನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅದು ಸ್ಯಾನಿಟರಿ ಪ್ಯಾಡ್ ಜಾಹೀರಾತು. ಸ್ಮೃತಿ ಆಗಷ್ಟೇ ವೃತ್ತಿ ಜೀವನ ಆರಂಭಿಸಿದ್ದರು. ಕೆರಿಯರ್ ಶುರು ಮಾಡುತ್ತಲೇ ಇಂತಹ ಜಾಹೀರಾತುಗಳಲ್ಲಿ ನಟಿಸುವುದು ಎಷ್ಟು ಸರಿ ಎಂದು ಅನೇಕರು ಗೊಂದಲಕ್ಕೊಳಗಾಗುವುದೂ ಉಂಟು. ಆದರೆ, ಈ ಜಾಹೀರಾತಿನಲ್ಲಿ ನಟಿಸಲು ಸ್ವಲ್ಪವೂ ಹಿಂಜರಿಯದ ಇರಾನಿ, ಮುಟ್ಟಿನ ಸಮಯದಲ್ಲಿ ಮಹಿಳೆಯರು ತೆಗೆದುಕೊಳ್ಳಬೇಕಾದ ನೈರ್ಮಲ್ಯ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಏಕೆ ಮಾತನಾಡಬಾರದು? ಇದರಲ್ಲಿ ತಪ್ಪೇನಿದೆ ಎಂಬ ಹೇಳಿಕೆ ಮೂಲಕ ಜಾಹೀರಾತಿನಲ್ಲಿ ನಟಿಸಿದ್ದರು. ಈಗ ಅದೇ ಜಾಹೀರಾತನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು, ‘ನಿಮ್ಮ ಧ್ವನಿ ಮತ್ತು ಭಾಷೆ ಇನ್ನೂ ಹಾಗೆಯೇ ಇದೆ… ನೀವು ಬದಲಾಗಿಲ್ಲ’ ಎಂದು ಹೇಳಿದರೆ, ಇನ್ನೂ ಕೆಲವರು ‘ಭಾಷೆಯ ಮೇಲಿನ ನಿಮ್ಮ ಹಿಡಿತಕ್ಕೆ ನಾವು ಅಭಿಮಾನಿಗಳು’ ಎಂದು ಕಮೆಂಟ್‌ ಮಾಡಿದ್ದಾರೆ.

https://www.instagram.com/reel/Cr0r-RDsWCW/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!