ಕನಸು ಕಾಣಿರಿ, ಟರ್ಮಿನೇಟರ್ ಯಾವಾಗಲೂ ಗೆಲ್ಲುತ್ತಾನೆ: ವಿಪಕ್ಷಗಳಿಗೆ ಮೋದಿ ಪೋಸ್ಟರ್ ಮೂಲಕ ಬಿಜೆಪಿ ಠಕ್ಕರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ವಿಪಕ್ಷಗಳು ಮುಂಬೈಯಲ್ಲಿ ಮೂರನೇ ಸಭೆ ನಡೆಸಲು ಸಿದ್ಧತೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಬಿಜೆಪಿ (BJP) ಹೊಸ ಪೋಸ್ಟರ್​​ವೊಂದನ್ನು ಟ್ವೀಟ್ ಮಾಡಿದೆ.

ಈ ಪೋಸ್ಟರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅಭಿನಯದ ‘ಟರ್ಮಿನೇಟರ್’ (Terminator)ಸಿನಿಮಾದಲ್ಲಿ ಬಿಂಬಿಸಿದ್ದಾರೆ.

“2024! I’ll be back!” ಎಂದು ಇದರಲ್ಲಿ ಬರೆಯಲಾಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಹೋರಾಟ ನಡೆಸುವ ಪ್ರತಿಪಕ್ಷಗಳ ಪ್ರಯತ್ನವನ್ನು ಕೆಣಕುವ ರೀತಿಯಲ್ಲಿ ಪೋಸ್ಟರ್ ಇದೆ.

ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟರ್‌ನೊಂದಿಗೆ ಶೀರ್ಷಿಕೆ ಹೀಗಿದೆ: “ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂದು ಪ್ರತಿಪಕ್ಷಗಳು ಭಾವಿಸುತ್ತವೆ. ಕನಸು ಕಾಣಿರಿ! ಟರ್ಮಿನೇಟರ್ ಯಾವಾಗಲೂ ಗೆಲ್ಲುತ್ತಾನೆ ಎಂದಿದ್ದಾರೆ.

2024 ರ ಲೋಕಸಭೆ ಚುನಾವಣೆಗೆ ತಮ್ಮ ಕಾರ್ಯತಂತ್ರವನ್ನು ಚರ್ಚಿಸಲು 26-ಪಕ್ಷಗಳ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ನಾಳೆಯಿಂದ ಮುಂಬೈನಲ್ಲಿ ಎರಡು ದಿನಗಳ ಸಭೆಯನ್ನು ನಡೆಸಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!