ನಿದ್ರಾಹೀನತೆ ಸಮಸ್ಯೆಗೆ ಅಮೆರಿಕಾದಲ್ಲಿ ಗಾಂಜಾ ಸೇವಿಸುತ್ತಿದ್ದೆ: NCBಗೆ ಆರ್ಯನ್ ಖಾನ್ ಹೇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡ್ರಗ್ಸ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಅಮೆರಿಕಾದಲ್ಲಿ ಪದವಿ ಪಡೆಯುತ್ತಿದ್ದಾಗ ಗಾಂಜಾ ಸೇವಿಸುತ್ತಿದ್ದರು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಹಿತಿ ನೀಡಿದೆ.

ಈ ಕುರಿತು ಚಾರ್ಜ್‌ಶೀಟ್​ನಲ್ಲಿ ಉಲ್ಲೇಖವಾಗಿದ್ದು, ನಿದ್ರಾಹೀನತೆ ಹಿನ್ನೆಲೆ ಇದನ್ನು ಬಳಕೆ ಮಾಡುತ್ತಿದ್ದರು ಎಂದು ಏಜೆನ್ಸಿ ಹೇಳಿದೆ.

ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿ 20 ಜನರಲ್ಲಿ 14 ಜನರ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಎನ್‌ಸಿಬಿ ಕಳೆದ ಅಕ್ಟೋಬರ್​​ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಅವರಲ್ಲಿ ಆರ್ಯನ್ ಖಾನ್ ಸೇರಿದಂತೆ ಆರು ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಮುಕ್ತಿಗೊಳಿಸಲಾಗಿದೆ.

ಎನ್‌ಸಿಬಿ ಮುಂದೆ ನೀಡಿದ ಹೇಳಿಕೆಯಲ್ಲಿ ಆರ್ಯನ್ ಖಾನ್, 2018ರಲ್ಲಿ ಅಮೆರಿಕಾದಲ್ಲಿ ಪದವಿ ಪಡೆಯುತ್ತಿದ್ದಾಗ ಗಾಂಜಾವನ್ನು ಬಳಕೆ ಮಾಡುತ್ತಿದ್ದೆ. ಆ ಸಮಯದಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದ ಪರಿಣಾಮ ಅಂತರ್ಜಾಲದಲ್ಲಿ ಲೇಖನಗಳನ್ನು ಓದಿ ಈ ಚಟಕ್ಕೆ ಬಿದ್ದಿದ್ದೆ ಎಂದು ಸ್ವತಃ ಅಧಿಕಾರಿಗಳ ಮುಂದೆ ಖಾನ್​ ಹೇಳಿದ್ದಾರೆ.

ಇನ್ನು ಮಾದಕ ವಸ್ತು ಸಂಬಂಧ ವಾಟ್ಸ್‌ಆ್ಯಪ್​ ಮಾಡಲಾದ ಸಂದೇಶ ಖಾನ್​ ಒಪ್ಪಿಕೊಂಡಿದ್ದು, ಬಾಂದ್ರಾದಲ್ಲಿ (ಮುಂಬೈ) ಒಬ್ಬ ಡೀಲರ್ ಬಗ್ಗೆ ಖಾನ್​ ಹೇಳಿದ್ದು, ಆತನ ಹೆಸರು ಹಾಗೂ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಆ ಡೀಲರ್​ ಸಹ ಆರೋಪಿ ಆಗಿರುವ ಆಚಿತ್​​ಗೆ ಗೊತ್ತಿದ್ದಾನೆ ಎಂದೂ ಸಹ ಹೇಳಿದ್ದಾನೆ.

ಆರ್ಯನ್ ಖಾನ್ ಅವರ ಮೊಬೈಲ್ ಫೋನ್​ನಲ್ಲಿ ಕಂಡು ಬಂದ ಚಾಟ್‌ಗಳು ಪ್ರಸ್ತುತ ಪ್ರಕರಣದಲ್ಲಿ ಅವರಿಗೆ ಸಂಪರ್ಕ ಹೊಂದಿಲ್. ಆರ್ಯನ್ ಖಾನ್ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ರಿಕವರಿ ಮಾಡಲಾದ ವಸ್ತುಗಳಲ್ಲಿ ಡ್ರಗ್ಸ್ ಕಂಡು ಬಂದಿಲ್ಲ ಎಂದು ಚಾರ್ಜ್​ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ನಟಿ ಅನನ್ಯಾ ಪಾಂಡೆ ಅವರೊಂದಿಗಿನ ಚಾಟ್ ಸಂಭಾಷಣೆಯನ್ನು ಸಹ ಆರ್ಯನ್ ಖಾನ್ ಒಪ್ಪಿದ್ದಾರೆ. ಅದರಂತೆ ಇದು ತಮಾಷೆಯಾಗಿ ಮಾಡಲಾದ ಸಂದೇಶ ಎಂದು ಚಾರ್ಜ್​ಶೀಟ್​ನಲ್ಲಿ ಬರೆಯಲಾಗಿದೆ.
ಆರ್ಯನ್ ಖಾನ್ ಅನನ್ಯ ಪಾಂಡೆ ಹೆಸರು ಹೇಳಿದ್ದ ಆಧಾರದ ಮೇಲೆ ಕಳೆದ ವರ್ಷ ಅಕ್ಟೋಬರ್ 21ರಂದು ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.ಆಕೆಯ ಮನೆಯನ್ನು ಶೋಧಿಸಿದಾಗ ಯಾವುದೇ ಅಕ್ರಮ ಕಳ್ಳಸಾಗಣೆ ಕಂಡು ಬಂದಿಲ್ಲ. ಜೊತೆಗೆ ಕೆಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್‌ಶೀಟ್ ಮೂಲಕ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!