June 27, 2026
Saturday, June 27, 2026
spot_img

ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಗುದ್ದಿದ ಮಿನಿ ಬಸ್‌: ಹಲವರಿಗೆ ಗಾಯ

ಹೊಸದಿಗಂತ ವರದಿ ಯಲ್ಲಾಪುರ:

ಮದುವೆ ಸಮಾರಂಭಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಮಿನಿ ಬಸ್‌ವೊಂದು ರಾಷ್ಟ್ರೀಯ ಹೆದ್ದಾರಿ 52ರ ಅರಬೈಲ್ ಘಟ್ಟದಲ್ಲಿ ಅಪಘಾತಕ್ಕೀಡಾಗಿ ಹಲವರು ಗಾಯಗೊಂಡ ಘಟನೆ ನಡೆದಿದೆ.

ಅರಬೈಲ್ ಗ್ರಾಮದಿಂದ ಬೆಳಗಾವಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿದ್ದ ಪ್ರಯಾಣಿಕರು ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದರು. ಮನೆ ತಲುಪಲು ಇನ್ನೂ ಎರಡು ಕಿಲೋಮೀಟರ್ ಮಾತ್ರ ಬಾಕಿ ಇರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:

ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಹೆದ್ದಾರಿ ಬದಿಯ ಗುಡ್ಡಕ್ಕೆ ಗುದ್ದಿದ ಪರಿಣಾಮ ವಾಹನದಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ 19 ಜನರು ಗಾಯಗೊಂಡಿದ್ದಾರೆ. ಈ ಕುರಿತು ಅರಬೈಲಿನ ಕೃಷ್ಣ ನಾರಾಯಣ ನಾಯ್ಕ ಅವರು ಮಿನಿ ಬಸ್ ಚಾಲಕ ಬಾಸಲದ ಸಂದೀಪ ತಳೇಕ‌ರ್ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !