ನಾಯಿಮರಿಗಳ ಬಾಲ, ಕಿವಿ ಕತ್ತರಿಸಿ ಉಪ್ಪು ಸವರಿ ಸ್ನಾಕ್ಸ್ ಮಾಡಿಕೊಂಡು ತಿಂದ ಕುಡುಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕುಡುಕನೊಬ್ಬ ಎರಡು ನಾಯಿ ಮರಿಗಳ ಬಾಲ ಮತ್ತು ಕಿವಿ ಕತ್ತರಿಸಿ ಉಪ್ಪು ಲೇಪಿಸಿ ಸ್ನಾಕ್ಸ್‌ ಮಾಡಿಕೊಂಡು ಮದ್ಯ ಸೇವಿಸಿದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಬರೇಲಿ ಜಿಲ್ಲೆಯ ಫರೀದ್‌ಪುರ ಪ್ರದೇಶದ ಎಸ್‌ಡಿಎಂ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ. ಪೋಲೀಸರ ಪ್ರಕಾರ, ಕುಡುಕ ಅವುಗಳಲ್ಲಿ ಒಂದರ ಕಿವಿ ಮತ್ತು ಇನ್ನೊಂದರ ಬಾಲವನ್ನು ಕತ್ತರಿಸಿ ಎಣ್ಣೆ ಜೊತೆಗೆ ಸೇವಿಸಿದ್ದಾನೆ. ಎರಡೂ ನಾಯಿಮರಿಗಳು ರಕ್ತಸ್ರಾವವಾದಿಂದ ಒದ್ದಾಡಿವೆ. ಸದ್ಯ ನಾಯಿ ಮರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಎರಡೂ ಚಿಕಿತ್ಸೆ ಪಡೆಯುತ್ತಿವೆ.
ಪೊಲೀಸರ ಪ್ರಕಾರ, ಆರೋಪಿ ಮುಖೇಶ್ ವಾಲ್ಮೀಕಿ ಮತ್ತು ಇನ್ನೊಬ್ಬ ವ್ಯಕ್ತಿ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದಾಗ ಈ ಅಮಾನವೀಯ ಕೃತ್ಯ ಎಸಗಿದ್ದಾರೆ. ಧೀರಜ್ ಪಾಠಕ್ ಎಂದು ಗುರುತಿಸಲಾದ ವ್ಯಕ್ತಿ ಮತ್ತು ಪ್ರಾಣಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ, ನಂತರ ಪೊಲೀಸರು ಆರೋಪಿಗಳ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!