ಒಟಿಟಿಯಲ್ಲಿ ಬರಲಿದೆ ದುಲ್ಕರ್ ಸಲ್ಮಾನ್ ಅಭಿನಯದ ‘ಹೇ ಸಿನಾಮಿಕಾ’ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದುಲ್ಕರ್ ಸಲ್ಮಾನ್, ಕಾಜಲ್ ಅಗರ್ವಾಲ್ ಮತ್ತು ಅದಿತಿ ರಾವ್ ಹೈದರಿ ನಟಿಸಿರುವ ನಿರ್ದೇಶಕಿ ಬೃಂದಾ ಅವರ ‘ಹೇ ಸಿನಾಮಿಕಾ’ ಚಿತ್ರ ಮಾರ್ಚ್ 31ರಂದು ನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ.
ಚಿತ್ರಮಂದಿರಗಳಲ್ಲಿ ಈಗಾಗಲೇ ಒಳ್ಳೆಯ ರೆಸ್ಪಾನ್ ಸಿಕ್ಕಿದ ಬಳಿಕ ಇದೀಗ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕಿ ಬೃಂದಾ, ಜಿಯೋ ಮತ್ತು ನೆಟ್​ಫ್ಲಿಕ್ಸ್​ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.
‘ಹೇ ಸಿನಾಮಿಕಾ’ ಕಥೆಯು ಹವಾಮಾನ ವಿಜ್ಞಾನಿಯಾದ ಮೌನ (ಅದಿತಿ) ಸುತ್ತ ಸುತ್ತುತ್ತದೆ. ಯಾಝನ್ (ದುಲ್ಕರ್) ಅವರೊಂದಿಗೆ ಪ್ರೀತಿಯಲ್ಲಿ ಬೀಳುವ ಮೌನ ಅವರ ಜೀವನದಲ್ಲಿ ಒಂದೆರಡು ವರ್ಷಗಳ ನಂತರ ಏನಾಗುತ್ತದೆ. ಮಲರ್ವಿಜಿ (ಕಾಜಲ್) ಆಗಮನದ ನಂತರ ಅವರ ಜೀವನದಲ್ಲಿ ಹೇಗೆ ಅನಿರೀಕ್ಷಿತ ತಿರುವುಗಳು ಉಂಟಾಗುತ್ತವೆ ಎಂಬುದನ್ನು ಕಥೆ ಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!